ಜಿಲ್ಲೆ

ಡಿವೈಡರ್‌ಗೆ ಕಾರ್ ಡಿಕ್ಕಿಯಾಗಿ ಸಾವು

ವೀರೇಶ ಸೌದ್ರಿ

ಹುಬ್ಬಳ್ಳಿ: ಡಿವೈಡರ್‌ಗೆ ಕಾರ್ ಡಿಕ್ಕಿಯಾಗಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ವರೂರು ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಮೃತನನ್ನು ರಾಣಿಬೆನ್ನೂರಿನ ಸಚಿನ ಅಗಸಿಬಾಗಿಲ(37) ಎಂದು ಗುರುತಿಸಲಾಗಿದೆ. ದಾವಣಗೆರೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.