ಜಿಲ್ಲೆ

ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ

ಮಡಿಕೇರಿ: ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೆ.ಎಚ್.ಪರಮೇಶ್ವರ(ಕಿರಣ್)(31) ಗುಂಡೇಟಿನಿಂದ ಮೃತಪಟ್ಟ ದುರ್ದೈವಿ.

 ಎಂ.ಎಂ.ಬೆಳ್ಯಪ್ಪ ಎಂಬುವವರೊಂದಿಗೆ ಪರಮೇಶ್ವರ್ ಸೋಮವಾರ ರಾತ್ರಿ ಬೇಟೆಗೆ ತೆರಳಿದ ಸಂದರ್ಭ ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ. ಈ ಸಂಬಂಧ ಮೃತರ ಸಹೋದರ ಕೆ.ಎಚ್.ಕೀರ್ತಿರವರು ಎ.ಎಂ.ಬೆಳ್ಯಪ್ಪ ಎಂಬಾತ ಬೇಟೆಗೆಂದು ಕರೆದುಕೊಂಡು ಹೋಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಟಣೆ ದಾಖಲಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..