ಯಲ್ಲಾಪುರ: ಬೈಕ್ ಗಟಾರದಲ್ಲಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ದೇಹಳ್ಳಿ ಸಮೀಪದ ಬಳಗಾರ ರಸ್ತೆಯಲ್ಲಿ ಸಂಭವಿಸಿದೆ.
ದೇಹಳ್ಳಿ ಗ್ರಾಪಂ ಗ್ರಂಥಪಾಲಕ ರಾಮಚಂದ್ರ ಮನ್ಯಾ ಕುಣಬಿ (25) ಮೃತ ದುರ್ದೈವಿ. ಈತ ದೇಹಳ್ಳಿಯಿಂದ ಬಳಗಾರಕ್ಕೆ ಹೋಗುವಾಗ ಬೈಕ್ ಚಕ್ರ ಮುರಿದು ನಿಯಂತ್ರಣ ಕಳೆದುಕೊಂಡು ಗಟಾರಕ್ಕೆ ಉರುಳಿದೆ. ಈತ ಸ್ಥಳದಲ್ಲೇ ಮೃತಪಟ್ಟಿದ್ದು,ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.