ಮಡಿಕೇರಿ:
ಒಂಟಿ ನಳಿಕೆಯ ಬಂದೂಕಿನಿAದ ಆಕಸ್ಮಿಕವಾಗಿ ಗುಂಡು ಹಾರಿ ಬುಧವಾರ ರಾತ್ರಿ ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಉದ್ಯಮಿ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಮೃತ ದುರ್ದೈವಿ.
ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿರುವ ಮಿತ್ರ ರಾತ್ರಿ 12 ಗಂಟೆ ಸುಮಾರಿಗೆ ವೈನ್ ಶಾಪ್ ಮುಚ್ಚಿ ಬಂದೂಕಿನೊAದಿಗೆ ಹೊರಬಂದಿದ್ದಾರೆ. ಇದೇ ಸಂದರ್ಭ ಹಾಲು ಸರಬರಾಜಿನ ವಾಹನ ಬಂದಿದ್ದು, ಮಿತ್ರ ಚಂಗಪ್ಪ ಹಾಲು ಕೊಂಡುಕೊಳ್ಳಲೆAದು ಕೈಯಲ್ಲಿದ್ದ ಬಂದೂಕು ಅನ್ನು ಸ್ಕೂಟರ್ ಮೇಲಿಟ್ಟಿದ್ದಾರೆ. ಈ ಸಂದರ್ಭ ಕೆಳಗೆ ಬಿದ್ದ ಬಂದೂಕಿನಿAದ ಆಕಸ್ಮಿಕವಾಗಿ ಗುಂಡು ಹಾರಿ ಮಿತ್ರ ಅವರ ಸೊಂಟದ ಭಾಗಕ್ಕೆ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.