ಜಿಲ್ಲೆ

ಕ್ವಾರಿಯಲ್ಲಿ ಮುಳುಗಿ ಬಾಲಕ ಸಾವು

Mangaluru - Nishantha Narayana

ಪುತ್ತೂರು: ಕಬಕ ಕಲ್ಲಂದಡ್ಕದ ಹಳೆಯ ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ ಅಜ್ಮಾನ್ (೧೬) ಎಂಬಾತ ಮೃತಪಟ್ಟಿದ್ದಾನೆ. ನಾಲ್ಕು ಮಂದಿ ಈಜಲು ತೆರಳಿದ್ದು, ಅಜ್ಮಾನ್ ಈಜಲು ಬಾರದೆ ನೀರಿನಲ್ಲಿ ಮುಳುಗಿದ್ದಾನೆ. ಜತೆಯಲ್ಲಿದ್ದ ಇಬ್ಬರು ಓಡಿ ಬಂದು ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದು, ಕಲಂದರ್ ಕಬಕ ತೆರಳಿ ದೇಹವನ್ನು ಮೇಲೆತ್ತಿದ್ದಾರೆ. ಮೃತದೇಹವನ್ನು ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.