ಜಿಲ್ಲೆ

ಈಜುಕೊಳಕ್ಕೆ ಬಿದ್ದು ದುರಂತ ಸಾವು

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರದ ಮೊಬೈಲ್ ಶಾಪ್ ಮಾಲೀಕ ನಿಶಾಂತ್ ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ ಸ್ವಿಮ್ಮಿಂಗ್ ಪೂಲ್ ದುರಂತದಲ್ಲಿ ಮೃತಪಟ್ಟಿದ್ದಾರೆ.

10 ಜನ ಬೈಕರ್ಸ್ ತಂಡದೊAದಿಗೆ ಚಿಕ್ಕಮಗಳೂರಿಗೆ ಪ್ರವಾಸ ತೆರಳಿದ್ದಾಗ ಈ ಘಟನೆ ನಡೆದಿದೆ. ಈಜಲು 4.5 ಅಡಿ ಆಳದ ಸ್ವಿಮಿಂಗ್ ಪೂಲ್‌ಗೆ ಧುಮುಕಿದಾಗ ಬೆನ್ನುಮೂಳೆಗೆ ಗಂಭೀರ ಗಾಯವಾಗಿದೆ. ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಅಸಾಧ್ಯ ಎಂದು ಆಸ್ಪತ್ರೆಯಿಂದ ಕುಶಾಲನಗರಕ್ಕೆ ರವಾನಿಸುವ ಮಾರ್ಗ ಮಧ್ಯೆ ನಿಶಾಂತ್ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ತಾಯಿ ಹಾಗೂ ಸಹೋದರ ಇದ್ದಾರೆ.