ಕಾಸರಗೋಡು: ಮೀಂಜ ಗ್ರಾಮ ಪಂಚಾಯಿತಿಯ ದಡ್ಡಂಗಡಿ ನಿವಾಸಿ ಗುಮ್ಮಣ್ಣ ಶೆಟ್ಟಿಗಾರ್ ಎಂಬುವರ ಪುತ್ರ ಚರಣ್‌ರಾಜ್(35) ಎಂಬುವರ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಇಲೆಕ್ಟ್ರಿಶಿಯನ್ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಊಟ ಮಾಡಿ ಕೊಠಡಿಗೆ ತೆರಳಿದ್ದ ಅವರನ್ನು ಗುರುವಾರ ಬೆಳಗ್ಗೆ ತಾಯಿ ಎಬ್ಬಿಸಲು ಹಲವು ಬಾರಿ ಕೂಗಿದರೂ ಪ್ರತಿಕ್ರಿಯೆ ಇಲ್ಲದಿರುವುದರಿಂದ ಕಿಟಿಕಿ ಮೂಲಕ ನೋಡಿದಾಗ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.