ಜಿಲ್ಲೆ

ನಿಂತಿದ್ದ ಕಾರಿನಲ್ಲಿ ಪತ್ತೆಯಾದ ಮೃತದೇಹ

ಗಂಗಾಧರ ಬಿ ವಿ

ಬಿಡದಿ: ಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿಯ ರೈಲ್ವೆ ನಿಲ್ದಾಣ ಬಳಿ ವ್ಯಕ್ತಿಯ ಶವ ಕಾರಿನಲ್ಲಿ ಪತ್ತೆಯಾಗಿದೆ. ಹೆದ್ದಾರಿಯ ಪಕ್ಕದಲ್ಲಿ ಕಾರು ಅನುಮಾನಸ್ಪದವಾಗಿ ಪಾರ್ಕ್ ಮಾಡಲಾಗಿತ್ತು.

ಈ ‌ಬಗ್ಗೆ ಸ್ಥಳೀಯರು ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರಿಸಿ ಪೊಲೀಸರು ಸ್ಥಳಕ್ಕೆ ಬಂದು ಕಾರಿನಲ್ಲಿ ನೋಡಿದಾಗ ಕಾರಿನ ಒಳಗೆ ವಿಸ ಸೇವಿಸಿ ಸಾವನ್ನಪ್ಪಿರುವ ಅನುಮಾನ ಬಂದು ಕಾರಿನ ಗ್ಲಾಸ್ ಹೊಡೆದು ನೋಡಿದಾಗ ಅದು ನಿಜವಾಗಿದೆ.

ಕಾರಿನಲ್ಲಿದ್ದ ದಾಖಲೆಗಳನ್ನ ಪರಿಶೀಲನೆ ಮಾಡಿದಾಗ ಬೆಂಗಳೂರಿನ ಡಿ.ಜೆ ಹಳ್ಳಿಯ ನಿವಾಸಿ 29 ವರ್ಷದ ಮುಜಾಹಿದ್ ಎಂದು ತಿಳಿದು ಬಂದಿದೆ. ಕೂಡಲೇ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಇನ್ನೂ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಜಿಲ್ಲಾ ಎಸ್.ಪಿ ಕಾರ್ತಿಕ್ ರೆಡ್ಡಿ, ಅಡಿಸನಲ್ ಎಸ್ಪ.ಪಿ ಸುರೇಶ್, ಡಿವೈಎಸ್ಪಿ ದಿನಕರ್, ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿದ್ದರು.