ಜಿಲ್ಲೆ

ನಗರದ ಕಪಿಲೇಶ್ವರ ಹೊಂಡದಲ್ಲಿ ಜೋಡಿ ಮೃತ ದೇಹಗಳು ಪತ್ತೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಇಲ್ಲಿನ ಕಪಿಲೇಶ್ವರ ಮಂದಿರದ ಪಕ್ಕದಲ್ಲಿರುವ ನೀರಿನ ಹೊಂಡದಲ್ಲಿ ಉಧವಾರ ಬೆಳ್ಳಂಬೆಳಗ್ಗೆ ಎರಡು ಮೃತ ದೇಹಗಳು ಪತ್ತೆಯಾಗಿದ್ದು, ನಾನಾ ಅನುಮಾ‌ಗಳಿಗೆ ಎಡೆ ಮಾಡಿಕೊಟ್ಟಿದೆ.
ಸದಾ ಜನಜಂಗುಳಿ ದಿಂದ ತುಂಬಿರುವ ಪ್ರದೇಶದಲ್ಲಿ ರುವ ಕಪಿಲೇಶ್ವರ ಹೊಂಡದಲ್ಲಿ ಜೋಡಿ ಮೃತ ದೇಹಗಳು ತೇಲುತ್ತಿರುವುದು ಕಂಡು ಸ್ಥಳೀಯ ಜನರು ಆತಂಕಗೊಂಡಿದ್ದಾರೆ. ಈ ಕುರಿತು ಖಡೇಬಜಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ‌ನೀಡಿ ಪರಿಶೀಲಿಸುತ್ತಿದ್ದಾರೆ.