ಕಡಬ: ಇಚಿಲಂಪಾಡಿಯಲ್ಲಿ ಸೋಮವಾರ ಸಾಯಂಕಾಲ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬುವರ ಪುತ್ರ ಜಾಕಿರ್(20) ಹಾಗೂ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್ ಮೃತಪಟ್ಟವರು.
ಯುವಕರು ಸ್ನಾನಕ್ಕೆಂದು ಇಚ್ಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದರು. ಸ್ಥಳೀಯರು ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.