ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದ ಸಂಚಾರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಶವವೊಂದು ಪತ್ತೆಯಾಗಿದೆ. ಮೋರಿ ಅಡಿಯಲ್ಲಿ ಶವ ಪತ್ತೆಯಾಗಿದ್ದು, ಎರಡು ವರ್ಷಗಳ ಹಿಂದೆಯೇ ದೇಹವನ್ನು ಬಚ್ಚಿಟ್ಟಿರುವ ಅನುಮಾನ ವ್ಯಕ್ತವಾಗಿದೆ.
ಇದೀಗ ಈ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು ಮೋರಿ ನಿರ್ಮಾಣ ಮಾಡಿದವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಶವವನ್ನು ತೆರವುಗೊಳಿಸಲಾಗಿರುವ ವಿಜಯನಗರ ಪೊಲೀಸರು ಅನಾಥ ಶವದ ಬಗ್ಗೆ ಮಾಹಿತಿ ಹುಡುಕಾಟ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)