ಕಾಸರಗೋಡು: ನಿಗೂಢವಾಗಿ ನಾಪತ್ತೆಯಾಗಿದ್ದ ನೆಲ್ಲಿಕಟ್ಟೆ ಸನಿಹದ ಪಾಂಬಾಚಿಕಡವು ನಿವಾಸಿ, ಕಾಸರಗೋಡಿನ ಬ್ಯಾಂಕ್ ಒಂದರ ಪಿಗ್ಮಿ ಏಜೆಂಟ್ ರಮೇಶ್ ಬಿ.ಎ.(50)ಅವರ ಮೃತದೇಹ ನೆಲ್ಲಿಕುಂಜೆ ಹಾರ್ಬರ್ ಸನಿಹ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಮೃತದೇಹ ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ರಮೇಶ್ ನಾಪತ್ತೆಯಾಗಿರುವ ಬಗ್ಗೆ ಸಹೋದರ ನೀಡಿದ ದೂರಿನನ್ವಯ ವಿದ್ಯಾನಗರ ಠಾಣೆ ಪೊಲೀಸರು ಶುಕ್ರವಾರ ಕೇಸು ದಾಖಲಿಸಿ ತನಿಖೆ ನಡೆಸುವ ಮಧ್ಯೆ ಅವರ ಸ್ಕೂಟರ್ ಕಾಸರಗೋಡು ಚಂದ್ರಗಿರಿ ಹೊಳೆ ಸನಿಹ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರಿಂದ ರಮೇಶ್ ಹೊಳೆಗೆ ಹಾರಿರುವ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಊರವರ ಸಹಾಯದಿಂದ ಹುಡುಕಾಟ ಮುಂದುವರಿಸುತ್ತಿದ್ದಂತೆ ಮೃತದೇಹ ಶನಿವಾರ ಪತ್ತೆಯಾಗಿದೆ.