ಜಿಲ್ಲೆ

ಚಿತ್ರದುರ್ಗ ಎಂದು ಯಾಕೆ ಕರೆಯುತ್ತಾರೆ? ನಗರದ ಹೆಸರಿನ ಕುರಿತು ಗೆಹ್ಲೋಟ್ ಕುತೂಹಲ

Chitradurga

ಚಿತ್ರದುರ್ಗ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಗರಕ್ಕೆ ಬುಧವಾರ ಭೇಟಿ ನೀಡಿದ್ದರು. ಮಧ್ಯಾಹ್ನ 12ರ ಸಮಯದಲ್ಲಿ ಬೆಂಗಳೂ ರಿಂದ ನೇರ ಶಿವಮೊಗ್ಗಕ್ಕೆ ತೆರಳಿದ್ದ ಅವರು,ಅದೇ ದಿನ ಸಂಜೆ 7.15ಕ್ಕೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ರಾತ್ರಿ ಊಟದ ಬಳಿಕ 8.30ರ ಸಮಯಕ್ಕೆ ಬೆಂಗಳೂರಿಗೆ ಹಿಂತಿರುಗಿದರು.

ಜಿಲ್ಲಾಡಳಿತದ ಆತಿಥ್ಯವನ್ನು ರಾಜ್ಯಪಾಲರು ಸ್ವೀಕರಿಸಿದರು. ಖಾಸಗಿ ಹೋಟೆಲ್‌ನಿಂದ ತರಿಸಿದ್ದ ವಿವಿಧ ಖಾದ್ಯಗಳಲ್ಲಿ ನಗರದಲ್ಲಿರುವ ಜೈನ್ ಸಮುದಾಯದ ಪ್ರಮುಖರೊಬ್ಬರ ತಯಾರಿಸಿ ತಂದಿದ್ದ ಖಾದ್ಯವೂ ಸೇರಿತ್ತು. ಈ ವೇಳೆ ನಗರಕ್ಕೆ ಚಿತ್ರದುರ್ಗ ಎಂದು ಯಾಕೆ ಹೆಸರಿದೆ ಎಂದು ರಾಜ್ಯಪಾಲರು ಕುತೂಹಲದಿಂದ ಅಧಿಕಾರಿಗಳನ್ನು ವಿಚಾರಿಸಿದರು.

ಆಗ ಜಿಲ್ಲೆಯ ಭವ್ಯ ಐತಿಹ್ಯ ಮತ್ತು ನಗರಕ್ಕೆ ಚಿತ್ರದುರ್ಗ ಎಂದು ಕರೆಯುವುದರ ಕುರಿತಂತೆ ಎಸ್‌ಪಿ ಕೆ.ಪರಶುರಾಮ್ ಒಂದಿಷ್ಟು ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡರು. ಡಿಸಿ ಕವಿತಾ ಎಸ್.ಮನ್ನಿಕೇರಿ,ಎಡಿಸಿ ಇ.ಬಾಲಕೃಷ್ಣ,ಎಎಸ್‌ಪಿ ಕುಮಾರ ಸ್ವಾಮಿ, ಜಿಪಂಸಿಇಒ ಡಾ.ಕೆ.ನಂದಿನಿದೇವಿ,ಎಸಿ ಆರ್. ಚಂದ್ರ ಯ್ಯ,ತಹಸೀಲ್ದಾರ್ ಸತ್ಯನಾರಾಯಣ ಮತ್ತಿತರರ ಹಿರಿಯ ಅಧಿಕಾರಿಗಳಿದ್ದರು. ರಾಜ್ಯಪಾಲರ ಭೇಟಿಯ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿ ರದ ಬಳಿ ಬಿಗಿ ಬಂದೋಬಸ್ತ್‌ನ್ನು ಏರ್ಪಡಿಸಲಾಗಿತ್ತು.