ಜಿಲ್ಲೆ

ಭದ್ರೆ ತ್ವರಿತಕ್ಕೆ ಡಿಸಿಎಂ-ಕೇಂದ್ರ ಸಚಿವ ಚರ್ಚೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಲ್ಲಿ ಶುಕ್ರವಾರ ಪರಸ್ಪರ ಭೇಟಿ ಮಾಡಿ ಚರ್ಚಿಸಿದರು.

ತರೀಕೆರೆ ವೈ ಜಂಕ್ಷನ್ ಹಾಗೂ ಅಬ್ಬಿಹೊಳಲು ಬಳಿಯ ಕಾಮಗಾರಿಗಳ ಪ್ರಗತಿ ಕುರಿತಂತೆ ಇಬ್ಬರು ಮಂತ್ರಿಗಳು ಸಮಾಲೋಚನೆ ನಡೆಸಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಡಿಸಿಎಂ ದೂರವಾಣಿ ಕರೆ ಮಾಡಿ ಅಬ್ಬಿನಹೊಳಲು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಕ್ರಮಗಳನ್ನು ವಹಿಸಿ, ಪ್ರಗತಿಯ ಮಾಹಿತಿ ನೀಡುವಂತೆ ಸೂಚಿಸಿದರು.

ಪಾವಗಡ ತಾಲೂಕಿನ ಕುಡಿಯುವ ನೀರು ಯೋಜನೆ ಹಾಗೂ ಹಿರಿಯೂರಿನ ವಿವಿ ಸಾಗರ ಜಲಾಶಯ ಮತ್ತು ನಾಲಾ ಅಭಿವೃದ್ಧಿಗೆ 740 ಕೋಟಿ ರೂ. ಬಿಡುಗಡೆ ಆಗಿದೆ. ಡಿಪಿಆರ್ ಸೇರಿ ಈ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಪ್ರಕ್ರಿಯೆಗಳ ಕುರಿತಂತೆ ಸಚಿವರು ಚರ್ಚಿಸಿದರು. ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಸಣ್ಣಚಿತ್ತಯ್ಯ ಇದ್ದರು.