ವಿಜಯಪುರ:ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಇತ್ತೀಚೆಗೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ವಕೀಲರ ಕುರಿತು ಅವಹೇಳನಕಾರಿ ಮಾತನಾಡಿರುವುದು ಖಂಡಿಸಿ ಮಂಗಳವಾರ ಜಿಲ್ಲಾ ನ್ಯಾಯವಾದಿಗಳ ಸಂದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಆಲಮಟ್ಟಿಗೆ ಬಾಗಿನ ಅರ್ಪಿಸಲು ಬಂದಾಗ ಮತ್ತು ವಿಧಾನ ಸಭೆಯಲ್ಲಿಯೂ ಕೂಡಾ ಡಿಸಿಎಂ ಡಿ.ಕೆ. ಶಿವಕುಮಾರ ವಕೀಲರ ಕುರಿತು ಅವಹೇಳನಕರವಾಗಿ ಮಾತನಾಡಿದ್ದಾರೆ. ಅವರ ಹಗುರವಾದ ಮಾತು ಇಡೀ ವಕೀಲರ ಸಮುದಾಯಕ್ಕೆ ಅವಮಾನಕರವಾಗಿದ್ದು, ಆಗೌರವಯುತವಾದ ಮಾತುಗಳನ್ನು ಖಂಡಿಸಿ ನಮ್ಮ ಸಂವು ಕೋರ್ಟ್ ಕಲಾಪ, ಕಂದಾಯ ಇಲಾಖೆ ಮತ್ತು ಗ್ರಾಹಕರ ವೇದಿಕೆ ಈ ಎಲ್ಲಾ ನ್ಯಾಯಾಲಯಗಳ ಕಾರ್ಯ ಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ ವಕೀಲರ ಕುರಿತು ಅವಹೇಳನಕಾರಿ ಆಡಿದ ಮಾತಗಳನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೆ, ವಕೀಲರ ಸಮುದಾಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಸಂದ ಅಧ್ಯಕ್ಷ ಧರೆಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಸುನೀಲ ಬಿರಾದಾರ, ಕಾರ್ಯದರ್ಶಿ ಸುರೇಶ ಚೂರಿ, ಎಂ.ಎ. ಕಾಖಂಡಕಿ, ಯು.ಎಂ. ಆಲಗೂರ, ವೈ.ಬಿ. ಬಡಿಗೆರ, ಬಿ.ಡಿ. ಬಿರಾದಾರ, ವಿ.ಎಚ್. ಗೊಲ್ಲಾಳಪ್ಪಗೋಳ, ಎಂ.ಆರ್. ಹವಾಲ್ದಾರ, ಪಿ.ಕೆ. ಹೂವಿನಗೋಳ, ಎಂ.ಎಸ್. ಇನಾಮದಾರ, ಎಸ್.ಎ. ಆಸಂಗಿ ಮತ್ತಿತರಿದ್ದರು.
ವಕೀಲರ ಕುರಿತು ಅವಹೇಳನಕಾರಿಯಾಗಿ ಮಾತುಗಳನ್ನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ ನಡೆ ಖಂಡಿಸಿ ನ್ಯಾಯವಾದಿಗಳ ಸಂದ ಸದಸ್ಯರು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. ಧರೆಪ್ಪಗೌಡ ಬಿರಾದಾರ, ಸುನೀಲ ಬಿರಾದಾರ, ಸುರೇಶ ಚೂರಿ ಮತ್ತಿತರರಿದ್ದಾರೆ.