ಜಿಲ್ಲೆ

ಡಿಸಿಸಿ ಬ್ಯಾಂಕ್‌ ಚುನಾವಣೆ; ಹೈವೋಲ್ಟೇಜ್ ಕಾದಾಟ!

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಶತಮಾನ ಪೂರೈಸಿರುವ ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ ಚುನಾವಣೆಯು ಭಾನುವಾರ ಸಹಕಾರಿ ಕ್ಷೇತ್ರದ ರಾಜಕೀಯ ತಾಪಮಾನವನ್ನು ಹೆಚ್ಚಿಸಿತು. ಹಲವು ದಿನಗಳಿಂದ ಊಹಾಪೋಹ, ಪಾಳಯ ಬದಲಾವಣೆ, ಬೆಂಬಲದ ಲೆಕ್ಕಾಚಾರಗಳ ನಡುವೆ ಆರಂಭವಾ ಮತದಾನವು ತೀವ್ರ ಕುತೂಹಲ ಕೆರಳಿಸಿದೆ.

ಬೆಳಿಗ್ಗೆ 9ಗಂಟೆಗೆ ಆರಂಭವಾದ ಮತದಾನಕ್ಕೆ ವಿವಿಧ ಕ್ಷೇತ್ರಗಳ ಸದಸ್ಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು. ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಹುಕ್ಕೇರಿ, ನಿಪ್ಪಾಣಿ, ಅಥಣಿ, ರಾಯಬಾಗ ತಾಲೂಕು ಕ್ಷೇತ್ರದ ಮತದಾರರುಸಕ್ರಿಯ ಭಾಗವಹಿಸುವಿಕೆ ಗಮನ ಸೆಳೆಯಿತು.

ರಾಜಕೀಯ ಬಿಸಿ ಗಾಳಿ – ಶಕ್ತಿಪ್ರದರ್ಶನದಲ್ಲಿ ರಣಕಹಳೆ

ಮತದಾನ ಕೇಂದ್ರಗಳ ಹೊರಗೆ ಪಕ್ಷಪಕ್ಷಾತೀತ ನಾಯಕರ ಹಾಜರಾತಿ, ಅಭ್ಯರ್ಥಿಗಳ ಪ್ರಚಾರ ವಾಹನಗಳ ಓಡಾಟ, ಬೆಂಬಲಿಗರ ಘೋಷಣೆಗಳು ಚುನಾವಣಾ ಸಂಭ್ರಮವನ್ನು ಹೋಲಿಸಿತು. ಜಾರಕಿಹೊಳಿ, ಕತ್ತಿ, ಸವದಿ ಬೆಂಬಲಿತ ಪ್ಯಾನೆಲ್‌ಗಳ ಮಧ್ಯೆ ನಡೆದ ಹೈವೋಲ್ಟೇಜ್ ಕಾದಾಟ ಚರ್ಚೆಯ ಜೋರಾಗಿದೆ.

ಪೊಲೀಸ್ ಇಲಾಖೆಯ ಬಿಗಿ ಭದ್ರತೆಯ ನಡುವೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.ಆದರೆ ಪ್ರತಿ ಮತಕ್ಕೂ ಮಹತ್ವ ಹೆಚ್ಚಿರುವ ಹಿನ್ನೆಲೆಯಲ್ಲಿ ಫಲಿತಾಂಶದ ನಿರೀಕ್ಷೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮತ ಎಣಿಕೆ ಸಂಜೆ 4.30ಕ್ಕೆ ನಡೆಯಲಿದ್ದು, ಬ್ಯಾಂಕ್ ಆಡಳಿತ ಹಸ್ತಾಂತರ ಯಾವ ಪಾಳಯದತ್ತ ತಿರುಗುತ್ತದೆ ಎಂಬುದು ಸಹಕಾರಿ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ.

ಫಲಿತಾಂಶದ ಪ್ರತಿಫಲ – ರಾಜಕೀಯ ಸಮೀಕರಣಗಳಿಗೂ ಪ್ರಭಾವ

ಈ ಚುನಾವಣೆಯ ಫಲಿತಾಂಶವು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಹಾಗೂ ಜಿಲ್ಲೆಯ ರಾಜಕೀಯ ಸಮೀಕರಣಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಯಾವ ಪಾಳಯದ ವಿಜಯದ ಧ್ವಜ ಹಾರುತ್ತದೆ ಎಂಬ ಕುತೂಹಲಕ್ಕೆ ಈಗ ಎಲ್ಲಾ ಕಣ್ಣುಗಳು ಎಣಿಕೆ ದಿನದತ್ತ ನೆಟ್ಟಿವೆ.