ಜಿಲ್ಲೆ

ಭ್ರಷ್ಟತೆ ತಡೆಯಲು ಇ-ಶಕ್ತಿ ಯೋಜನೆ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾಹಿತಿ

Kolar

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 2 ಸಾವಿರ ಮಹಿಳಾ ಸಂಗಳ ಆರ್ಥಿಕ ಚಟುವಟಿಕೆಗಳನ್ನು ದಾಖಲಿಸಲು ಜಾರಿಗೆ ತಂದಿರುವ ಇಶಕ್ತಿ ಯೋಜನೆ ಸಫಲಗೊಳಿಸಲು ನಬಾರ್ಡ್ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ಇ-ಶಕ್ತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಗಣಕೀಕರಣ ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಇಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಬಹುದು. ಸೊಸೈಟಿಗಳಲ್ಲಿ ಪಾರದರ್ಶಕತೆ ಇದ್ದಲ್ಲಿ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ ಎಂದರು.

ಎರಡು ದಿನದೊಳಗೆ ಮಹಿಳಾ ಸಂಗಳ ವಾಹಿತಿ ಅಪ್‌ಲೋಡ್ ವಾಡಬೇಕು, ಇಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸಬೇಕು. ಆದರೆ ಇಲ್ಲಿಯವರೆಗಿನ ಸಾಧನೆ ತಪ್ತಿದಾಯವಾಗಿಲ್ಲ, ಇಚ್ಛಾಶಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ ಜನರ ನಂಬಿಕೆ ಉಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬ್ಯಾಂಕ್ ಋಣ ತೀರಿಸಿ: ಬ್ಯಾಂಕ್ ನಿಮಗೆ ಬದುಕು ಕಟ್ಟಿಕೊಟ್ಟಿದೆ, ಅನ್ನ ನೀಡುವ ಬ್ಯಾಂಕಿನ ಋಣ ತೀರಿಸಿ, ಯೋಜನೆ ಅನುಷ್ಠಾನಕ್ಕೆ ನೇಮಿಸಿರುವ ಪ್ರೇರಕರು ತಿಂಗಳಿಗೆ ನಾಲ್ಕೆ ದು ದಿನ ಕೆಲಸ ವಾಡಿದರೆ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಬಹುದು ಎಂದರು. ಮಾಹಿತಿ ಅಪ್‌ಲೋಡ್ ಮಾಡುವುದು ವಿಳಂಬವಾದರೆ ಶೇ.25 ಸಂಭಾವನೆ ಕಡಿತಗೊಳ್ಳುತ್ತದೆ. ಜ.26ಕ್ಕೆ ಶೇ.100 ಗಣಕೀಕರಣ ಆಗಬೇಕು, ಪ್ರಸ್ತುತ ಸೊಸೈಟಿಗಳು ಶೇ.90 ಗಣಕೀಕರಣವಾಗಿದ್ದರೂ ವಹಿವಾಟು ಶೇ.60 ಮಾತ್ರ ಆಗಿರುವುದರಿಂದ ಜ.26ರೊಳಗೆ ಶೇ.100 ಗಣಕೀಕರಣ ಮತ್ತು ಆನ್‌ಲೈನ್ ವಹಿವಾಟು ಕಾರ್ಯಗತವಾಗಬೇಕು ಎಂದರು.

ಕಾಯಕ ಯೋಜನೆ: ಕಾಯಕ ಯೋಜನೆಯಡಿ ಮಹಿಳಾ ಸಂಗಳಿಗೆ ಶೂನ್ಯಬಡ್ಡಿಗೆ 5 ಲಕ್ಷ ರೂ. ಹಾಗೂ ಬಡ್ಡಿ ಆಧಾರದಲ್ಲಿ 5 ಲಕ್ಷ ರೂ. ಸಾಲ ನೀಡಲಾಗುತ್ತದೆ, ಈ ಯೋಜನೆ ಮಹಿಳಾ ಸ್ವ-ಸಹಾಯ ಸಂಗಳಿಗೆ ವರದಾನವಾಗಿರುವುದರಿಂದ ಅರ್ಜಿ ಸಲ್ಲಿಸಬಹುದು ಎಂದರು.

ಚಿನ್ನದ ಸಾಲ ಹೆಚ್ಚಳ: ಸಿಬ್ಬಂದಿಯೊಬ್ಬರು ಚಿನ್ನದ ಸಾಲ ಹೆಚ್ಚಳಕ್ಕೆ ಬೇಡಿಕೆ ಇಟ್ಟಾದ ಸ್ಪಂದಿಸಿ, ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸಾಲದ ಮೀತಿಯನ್ನು 10 ಲಕ್ಷ ರೂಪಾಯಿಗೆ ಏರಿಕೆ ವಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಗೌರಿಬಿದನೂರು ಶಾಖೆ ಎರಡೂ ಜಿಲ್ಲೆಗೆ ಮಾದರಿಯಾಗಿದೆ, ಪ್ರತಿದಿನದ ವಹಿವಾಟು ಆನ್‌ಲೈನ್‌ಗೆ ದಾಖಲಿಸುವ ಮೂಲಕ ಶಿಸ್ತು ಪಾಲಿಸಲಾಗುತ್ತಿದೆ. ಅದೇ ರೀತಿ ಎಲ್ಲ ಕಡೆ ಆಗಬೇಕು ಎಂದು ಆಶಿಸಿದರು. ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ದೊಡ್ಡಮನಿ ಹುಸೇನ್‌ಸಾಬ್ ದೊಡ್ಡಮನಿ ಉಪಸ್ಥಿತರಿದ್ದರು.

700 ಕೋಟಿ ರೂ. ಗುರಿ : ಬ್ಯಾಂಕ್ ಎಲ್ಲ ವಿಷಯಗಳಲ್ಲೂ ಸಾಧನೆ ಮಾಡಿದೆ. ಆದರೆ ಠೇವಣಿ ಸಂಗ್ರಹದಲ್ಲಿ ನಾವು ಹಿಂದುಳಿದಿದ್ದೇವೆ, ವಾರ್ಚ್ ವೇಳೆಗೆ 700 ಕೋಟಿ ರೂ. ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಗೋವಿಂದಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.