ಸರ್ವ ಸದಸ್ಯರ ಸಭೆಯಲ್ಲಿ ಗದ್ದಲವುಂಟಾಗಿ ಸದಸ್ಯರೆಲ್ಲ ಗುಂಪು ಗುಂಪಾಗಿ ಚರ್ಚಿಸಿದರು. 
ಜಿಲ್ಲೆ

ಡಿಸಿಸಿ ಬ್ಯಾಂಕ್​ ಚುನಾವಣೆಗೆ ಪಟ್ಟು

ಸರ್ವ ಸದಸ್ಯರ ಸಭೆಯಲ್ಲಿ ಗದ್ದಲವುಂಟಾಗಿ ಸದಸ್ಯರೆಲ್ಲ ಗುಂಪು ಗುಂಪಾಗಿ ಚರ್ಚಿಸಿದರು.

ಕೋಲಾರ ಡೆಸ್ಕ್

ಸರ್ವ ಸದಸ್ಯರ ಸಭೆಯಲ್ಲಿ ಒತ್ತಾಯ - ಪ್ರಶ್ನೆಗಳಿಗೆ ಉತ್ತರಿಸಲು ಪರದಾಡಿದ ಅಧಿಕಾರಿಗಳು



ಕೋಲಾರ: ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಚುನಾವಣೆ ನಡೆಸುವುದು, ಸಾಲ ವಿತರಣೆ ಬಗ್ಗೆಯೇ ವ್ಯಾಪಕ ಚರ್ಚೆಗಳು ನಡೆದವು. ಬ್ಯಾಂಕಿನ ಆಡಳಿತಾಧಿಕಾರಿ ಬಿ.ಕೆ.ಸಲೀಂ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ಆರಂಭದಲ್ಲೇ ಸದಸ್ಯರು ಚುನಾವಣೆ ಬಗ್ಗೆ ಚರ್ಚೆ ಶುರುಮಾಡಿದರು. ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಯಿತಾದರೂ ಸಕಾಲಕ್ಕೆ ಚುನಾವಣೆ ನಡೆಸದ ಅಧಿಕಾರಿಗಳೂ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಸಕಾಲಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಸದಸ್ಯರೆಲ್ಲ ಒಕ್ಕೊರಲಿನಿಂದ ರ್ನಿಣಯ ಸೂಚಿಸಿದರು. ಎರಡೂ ಜಿಲ್ಲೆಯ ಕೆಲ ಸದಸ್ಯರು ಚುನಾವಣೆ ಪರ ಧ್ವನಿ ಎತ್ತಿದರೆ, ಇನ್ನೂ ಕೆಲವರು ಭ್ರಷ್ಟಾಚಾರದ ತನಿಖೆ ಮುಗಿಯಲಿ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಸಭೆ ಮುಂದುವರಿಯಲು ಅನುವು ಮಾಡಿಕೊಟ್ಟರು.
ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರದ ಅವಧಿ ಮುಗಿದ ನಂತರ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಆದರೆ, ರೈತರಿಗೆ, ಮಹಿಳಾ ಸಂಗಳ ಸದಸ್ಯರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸಾಲ ನೀಡುವಂತೆ ಮಹಿಳಾ ಸಂಗಳ ಸದಸ್ಯರು, ವಿವಿಧ ಸಂ&ಸಂಸ್ಥೆಗಳ ಮುಖಂಡರು, ಮಾಜಿ ನಿರ್ದೇಶಕರು ಒತ್ತಾಯ ಮಾಡಿಕೊಂಡು ಬರುತ್ತಿದ್ದರೂ ಜನಪ್ರತಿನಿಧಿಗಳು, ಬ್ಯಾಂಕಿನ ಅಧಿಕಾರಿಗಳು ಕುಂಟು ನೆಪ ಹೇಳಿಕೊಂಡು ವಿಳಂಬ ಮಾಡುತ್ತಿದ್ದಾರೆ. ಇದಕ್ಕೆ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಾಲ ವಿತರಣೆ ಮಾಡಬೇಕು ಎಂದು ಪಟ್ಟು ಹಿಡಿದರು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ತಬ್ಬಿಬ್ಬಾದರು.


ಪಟ್ಟಭದ್ರ ಹಿತಾಸಕ್ತಿಗಳ ಹಸ್ತಕ್ಷೇಪ

ನಾಗನಾಳ ಎಂಪಿಸಿಎಸ್​ ಪ್ರತಿನಿಧಿ ಮಂಜುನಾಥ್​ ಮಾತನಾಡಿ, ಸಭೆಯನ್ನು ನಿಯಮಾನುಸಾರ ನಡೆಸುವಲ್ಲಿ ಆಡಳಿತಾಧಿಕಾರಿ ವಿಲರಾಗಿದ್ದಾರೆ. ಯಾರೋ ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಹಸ್ತಕ್ಷೇಪದಿಂದ ಬ್ಯಾಂಕ್​ ಪುನ@ ಪಾತಾಳಕ್ಕೆ ಕುಸಿಯುವ ಆತಂಕ ಕಾಡುತ್ತಿದೆ. ಇದಕ್ಕೆ ಅವಕಾಶ ನೀಡದೆ ಬಡವರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.ಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶೀಲಾ, ಎಜಿಎಂಗಳಾದ ಶಿವಕುಮಾರ್​, ನಾಗೇಶ್​, ಹುಸೇನ್​ ದೊಡ್ಡಮುನಿ, ಖಲೀಂವುಲ್ಲಾ, ಪದ್ಮ ಮತ್ತಿತರರು ಹಾಜರಿದ್ದರು.

9.88 ಕೋಟಿ ರೂ.ನಷ್ಟದಲ್ಲಿ
ಶೇಷಾದ್ರಿಪುರ ಗೋಪಾಲ್​ ಮಾತನಾಡಿ, ಡಿಸಿಸಿ ಬ್ಯಾಂಕ್​ ಕೋಲಾರ&ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ರೈತರ, ಮಹಿಳೆಯರ ಜೀವನಾಡಿಯಾಗಿದೆ. ಆದರೆ, ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಕ್ಕಾಗಿ ಬಡವರ ಜತೆ ಚೆಲ್ಲಾಟವಾಡಲಾಗುತ್ತಿದೆ. ಅಧಿಕಾರಿಗಳು ಚುನಾವಣೆ ನಡೆಸಿ, ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದ ನಂತರ ಮಹಿಳೆಯರಿಗೆ, ರೈತರಿಗೆ ಎಷ್ಟು ಸಾಲ ನೀಡಲಾಗಿದೆ? ಮರು ಪಾವತಿ ಎಷ್ಟಾಗಿದೆ?, ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವ ಮಹಿಳಾ ಸಂಗಳಿಗೆ ಏಕೆ ಮರುಸಾಲ ವಿತರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಡಳಿತಾಧಿಕಾರಿ ಸಲೀಂ, ಬ್ಯಾಂಕಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಬಡ್ಡಿ ಹಣ ಬಾಕಿ ಇದೆ. ಇದರಿಂದಾಗಿ ಬ್ಯಾಂಕ್​ 9.88 ಕೋಟಿ ರೂ. ನಷ್ಟದಲ್ಲಿದೆ. ಸಾಲ ವಿತರಣೆ ಕಡಿಮೆಯಾಗಿದ್ದು, ಬಾಕಿ ಇರುವ ಸಾಲ ವಸೂಲಿ ಮಾಡಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಹಿಂದೆ ಆಗಿರುವ ತಪು$್ಪಗಳು ಮರುಕಳಿಸದಂತೆ ಎಚ್ಚರವಹಿಸಲಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವ ಸಂಗಳ ಪಟ್ಟಿ ತಯಾರಿಸಿದ್ದು, ಸಾಲ ವಿತರಿಸಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಇದಕ್ಕೆ ಸಂಪನ್ಮೂಲ ಕ್ರೋಡಿಕರಣ ಮಾಡಲಾಗುತ್ತಿದೆ ಎಂದು ಉತ್ತರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಆಡಳಿತ ಮಂಡಳಿ ವೇಳೆ ಬ್ಯಾಂಕ್​ ಉತ್ತಮವಾಗಿ ನಡೆಯುತ್ತಿತ್ತು, ಆಡಳಿತಾಧಿಕಾರಿ ಬಂದ ನಂತರ ಪಾತಾಳಕ್ಕೆ ಕುಸಿಯುತ್ತಿದೆ. ಸಾಲ ವಿತರಣೆ ಮಾಡದಿದ್ದರೆ ಸಂಗಳ ಸದಸ್ಯರು ಉಳಿತಾಯ ಹಣ, ರೈತರು ಇಟ್ಟಿರುವ ಠೇವಣಿಯನ್ನು ವಾಪಸ್​ ಪಡೆಯುತ್ತಾರೆ. ಎಚ್ಚರ ತಪ್ಪಿದರೆ ಬ್ಯಾಂಕ್​ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಪ್ಪೊಪ್ಪಿಕೊಂಡ ಆಡಳಿತಾಧಿಕಾರಿ
ಬ್ಯಾಂಕಿನ ನಿರ್ದೇಶಕ ಹಾಗೂ ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಕೆ.ವಿ.ದಯಾನಂದ ಮಾತನಾಡಿ, ಲೆಕ್ಕಪರಿಶೋಧನೆಯಲ್ಲಿ ಹಣ ಸೋರಿಕೆಯಾಗಿರುವುದು ನಮೂದು ಮಾಡಿದ್ದೀರಿ, ಕೃಷಿಯೇತರ ಸಾಲಕ್ಕೆ ಬಡ್ಡಿ ದರ ನಿಗದಿ ಮಾಡುವುದು ಬ್ಯಾಂಕ್​ ಹೊರತು ಸರ್ಕಾರವಲ್ಲ. ಇನ್ನು ಕೃಷಿಯೇತರ ಬಡ್ಡಿ ದರ ನಿಗದಿ ಮಾಡುವುದು ಬ್ಯಾಂಕೇ. ನೀವು ಏಕೆ ಆಡಿಟ್​ ಆಕ್ಷೇಪದಲ್ಲಿ ತಪು$್ಪ ನಮೂದಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಆಡಳಿತಾಧಿಕಾರಿ ಸಲೀಂ, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಮಾಡಿರುವ ತಪ್ಪನ್ನು ಒಪ್ಪಿಕೊಂಡರು.

ಸಂಸದರ ಮೇಲೆ ಒತ್ತಡ ತರೋಣ
ಸದಸ್ಯ ಹನುಮಂತಪ್ಪ ಮಾತನಾಡಿ, ಎಲ್​ಎಲ್​ಎಂ ಮತ್ತು ಎನ್​ಆರ್​ಎಲ್​ಎಂ ಬಡ್ಡಿ ಮೊತ್ತ ಕೇಂದ್ರ ಸರ್ಕಾರದಿಂದ 69 ಕೋಟಿ ರೂ. ಬರಬೇಕಾಗಿದೆ. ಸಂಸದರಾದ ಡಾ.ಕೆ.ಸುಧಾಕರ್​ ಮತ್ತು ಎಂ.ಮಲ್ಲೇಶ್​ ಬಾಬು ಅವರನ್ನು ಸಂಪರ್ಕಿಸಿ ಕೇಂದ್ರದ ಅಧಿಕಾರಿಗಳ ಮೇಲೆ ಒತ್ತಡ ತಂದು ಬಿಡುಗಡೆಗೊಳಿಸಲು ಮನವಿ ಮಾಡೋಣ, ಇದಕ್ಕೆ ಅಧಿಕಾರಿಗಳ ನಿಯೋಗವೂ ಬರಬೇಕು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶ್ರೀನಿವಾಸಪುರ ವೆಂಕಟೇಶ್​, ಬಕ್ಷು, ದಿಂಬಾಲ ಅಶೋಕ, ನಾರಾಯಣಸ್ವಾಮಿ, ಇದರಲ್ಲಿ ರಾಜಕೀಯ ಬೆರಕೆ ಮಾಡುವುದು ಬೇಡ, ಅವರನ್ನು ಭೇಟಿ ಮಾಡಬೇಕಾದ ಅನಿವಾರ್ಯ ಏನಿದೆ?, ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ, ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.