ಜಿಲ್ಲೆ

ವಕ್ಫ್ ಬೋರ್ಡ್ ಹೆಸರಿನಲ್ಲಿ ಬಿಜೆಪಿಯಿಂದ ಧಾರ್ಮಿಕ ಅರಾಜಕತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ವಕ್ಫ್ಬೋರ್ಡ್ ನೊಟೀಸ್ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ಧಾರ್ಮಿಕ ಅರಾಜಕತೆ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ. 2014ರ ಚುನಾವಣೆ ಪ್ರಣಾಳಿಯಲ್ಲಿ ಬಿಜೆಪಿಯೇ ಮುಸ್ಲೀಮರಿಗೆ ಸಮಾನ ಅವಕಾಶ ಭರವಸೆ ನೀಡಿದೆ. ವಕ್ಫ್ ಸಬಲೀಕರಣ, ವಕ್ಫ್ ಆಸ್ತಿ ಅತಿಕ್ರಮಣ ತೆರವು ಮಾಡುವ ಪ್ರಸ್ತಾಪವನ್ನೂ ಮಾಡಿದೆ. ರಾಜ್ಯದಲ್ಲಿ ಹಿಂದಿನ ಬೊಮ್ಮಾಯಿ ಸರ್ಕಾರವೇ ವಕ್ಫ್ ಆಸ್ತಿ ಅತಿಕ್ರಮಣ ತೆರವಿಗೆ ಮುಂದಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಬAಧ 416 ನೊಟೀಸ್‌ಗಳನ್ನೂ ಕೊಡಲಾಗಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದ ಅವಧಿಯ ನೊಟೀಸ್ ಸೇರಿದಂತೆ ಎಲ್ಲಾ ನೊಟೀಸ್‌ಗಳನ್ನು ಸಿದ್ದರಾಮಯ್ಯ ಸರ್ಕಾರ ಹಿಂತೆಗೆದುಕೊAಡಿದೆ. ಆರ್‌ಟಿಸಿಯಲ್ಲಿ ರೈತರ ಹೆಸರು ಬರುವಂತೆ ನೋಡಿಕೊಳ್ಳಲಾಗಿದೆ. ಕೆಲವು ಅಧಿಕಾರಿಗಳಿಂದ ಉಂಟಾದ ಗೊಂದಲವನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕುಶಾಲನಗರ ಪ್ರಕರಣವನ್ನೂ ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳಲು ಸಂಚು ರೂಪಿಸಿದೆ. ಈ ಪ್ರಕರಣಕ್ಕೂ ವಕ್ಫ್ ಬೋರ್ಡ್ಗೂ ಸಂಬAಧ ಇಲ್ಲ ಎನ್ನುವುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ. ಆದರೆ ಈ ಪ್ರಕರಣವನ್ನು ಬಳಸಿಕೊಂಡು ಗಲಭೆ ಎಬ್ಬಿಸಲು ಬಿಜೆಪಿಯ ಕೆಲವರು ಸಂಚು ರೂಪಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದ ಮಹಿಳೆ ಜತೆ ಬಿಜೆಪಿಯ ಪ್ರಮುಖರು ಸಂಪರ್ಕ ಸಾಧಿಸಿ ಚಿತಾವಣೆ ನಡೆಸಿದ್ದಾರೆ. ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಪೊಲೀಸರು ಸತ್ಯ ಹೊರಗೆ ತರಬೇಕು. ಪ್ರಕರಣ ಸಂಬAಧ ಭಾವನಾತ್ಮಕ ವಾತಾವರಣ ಸೃಷ್ಟಿ ಮಾಡಿ ಕೊಡಗಿನಲ್ಲಿ ಗಲಭೆ ಸೃಷ್ಟಿಗೆ ಪ್ರಯತ್ನ ನಡೆಸಿರುವುದನ್ನು ಬಯಲಿಗೆ ತರಬೇಕು. ಈ ಸಂಬAಧ ಎಸ್‌ಪಿ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು.

ಸಂಸದ ಪ್ರತಾಪ್ ಸಿಂಹ ಕೂಡ ಪ್ರಕರಣದ ದುರ್ಲಾಭ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಅವರ ಇಂಥ ಕೆಲಸಗಳಿಂದಾಗಿಯೇ ಅವರ ಪಕ್ಷದವರೇ ಟಿಕೆಟ್ ಕೊಟ್ಟಿಲ್ಲ. ಅವರ ಆಟ ಕೊಡಗಿನಲ್ಲಿ ನಡೆಯುವುದಿಲ್ಲ. ಶಾಸಕರ ಬಗ್ಗೆ ಮಾತನಾಡುವುದಕ್ಕಿಂತ ಬಾಯಿ ಮುಚ್ಚಿಕೊಂಡು ಇರುವುದು ಒಳಿತು. ಕೊಡಗಿನಲ್ಲಿ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ದಿ ಕೆಲಸ ಸ್ಥಗಿತ ಆಗಿಲ್ಲ. ಮಳೆಯಿಂದ ಸ್ವಲ್ಪ ಹಿನ್ನಡೆ ಆಗಿದೆ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಬಿಜೆಪಿಯವರು ಜಿಲ್ಲೆಯಲ್ಲಿ ಕೋಮು ಸೌಹಾರ್ದ ಹದಗೆಡಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕುಶಾಲನಗರ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಸತ್ಯ ಬಯಲಿಗೆ ತರಬೇಕು. ಬಿಜೆಪಿಯ ರಾಜಕೀಯ ಹಿಂದುತ್ವವೇ ಇದಕ್ಕೆಲ್ಲಾ ಕಾರಣ. ಬಿಜೆಪಿ ಅಭಿವೃದ್ಧಿ ಪರ ರಾಜಕಾರಣ ಮಾಡಲಿ ಎಂದರು.

ಪಕ್ಷದ ವಕ್ತಾರ ತೆನ್ನೀರ ಮೈನಾ, ಸಾಮಾಜಿಕ ಜಾಲತಾಣ ಸಂಚಾಲಕ ಸೂರಜ್ ಹೊಸೂರು, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಮುಖಂಡರಾದ ಟಿ.ಪಿ. ರಮೇಶ್ ಇದ್ದರು.