ಕೂಡಲಸಂಗಮ: ಬಸವ ಜಯಂತಿ ನಿಮಿತ್ತ ಕೂಡಲಸಂಗಮದಲ್ಲಿ ನಡೆಯುವ ಸರ್ವಧರ್ಮ ಸಂಸತ್ತು ಕಾರ್ಯಕ್ರಮದ ಸ್ಥಳವನ್ನು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾ ಪಂಚಾಯಿಯಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ ಪರಿಶೀಲಿಸಿದರು.
ಊಟದ ವ್ಯವಸ್ಥೆಯ ಸ್ಥಳ, ವಾಹನ ಪಾರ್ಕಿಂಗ್ ಮಾಡಲು ಬಸ್ ನಿಲ್ದಾಣ, ಬಸವಣ್ಣನ ಐಕ್ಯ ಸ್ಥಳದಿಂದ ಸಭಾ ಭವನದ ವರೆಗೆ ಮೆರವಣಿಗೆ ಮಾಡುವ ಸ್ಥಳ, ದಾಸೋಹ ಭವನ, ಮಂಡಳಿಯ ಕಾರ್ಯಾಲಯದ ಸಭಾಂಗಣ, ಯಾತ್ರಿ ನಿವಾಸ ವೀಕ್ಷಿಸಿ ಚರ್ಚಿಸಿದರು.