ರಾಯಚೂರು ನಗರದ ಹೊರವಲಯದಲ್ಲಿ ನರ‍್ಮಾಣವಾಗುತ್ತಿರುವ ಜಿ೩ ಮಾದರಿಯ ವಸತಿ ಸಮುಚ್ಛಯದ ಕಾಮಗಾರಿಯ ಸ್ಥಳಕ್ಕೆ ಶನಿವಾರ ಜಿಲ್ಲಾಧಿಕಾರಿ ನಿತೀಶ್ ಕೆ. ಭೇಟಿ ನೀಡಿದರು.
ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯ ಎಎಚ್‌ಪಿ ಉಪ ಘಟಕದಡಿ ೨೪೧೯ ಮನೆಗಳು ೨೦೨೧-೨೨ ನೇ ಸಾಲಿನಲ್ಲಿನ ವಸತಿ ಸಮುಚ್ಛಯದ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದರು.
ಕೇಂದ್ರ ರ‍್ಕಾರದಿಂದ ೧.೫೦ ಲಕ್ಷ ಮತ್ತು ರಾಜ್ಯ ರ‍್ಕಾರದಿಂದ ೨ ಲಕ್ಷ ಸಬ್ಸಿಡಿ ಸಹಾಯಧನದಡಿ ನರ‍್ಮಾಣವಾಗುತ್ತಿರುವ ಈ ವಸತಿ ಸಮುಚ್ಛಯದಲ್ಲಿ ಜನರಿಗೆ ಅನುಕೂಲವಾಗುವ ಹಾಗೆ ಮೂಲಭೂತ ಸೌರ‍್ಯ ಕಲ್ಪಿಸಲು ಒತ್ತು ಕೊಡಬೇಕು. ಜನ ಬಳಕೆಗೆ ಅನುಕೂಲವಾಗುವ ಹಾಗೆ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ, ವೈಜ್ಞಾನಿಕ ಮಾದರಿಯಲ್ಲಿ ಒಳಚರಂಡಿ ಹಾಗೂ ನರ‍್ಮಾಣಕ್ಕೆ ಒತ್ತು ಕೊಡಬೇಕು. ಕಾಮಗಾರಿ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಶಿಸ್ತುಬದ್ಧವಾದ ಮೇಲ್ವಿಚಾರಣೆ ಮಾಡಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದ ಏಜೆನ್ಸಿ ಹಾಗೂ ಅಭಿಯಂತರರಿಗೆು ಸೂಚನೆ ನೀಡಿದರು.
ನಗರದಲ್ಲಿ ವಾಸ ಮಾಡಿದ ಬಡವರಿಗೆ ಈ ಯೋಜನೆಯಿಂದ ಒಂದು ಸೂರು ಪಡೆದುಕೊಳ್ಳಲು ಅನುಕೂಲವಾಗಲಿದ್ದು, ಕಾಮಗಾರಿಯಲ್ಲಿ ಗುಣಮಟ್ಟದ ಕಾಯ್ದುಕೊಳ್ಳಬೇಕು. ಮರ‍್ಗಸೂಚಿಯಂತೆ ಗುಣಮಟ್ಟದ ಸಾಮಗ್ರಿ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನರ‍್ದೇಶನ ನೀಡಿದರು.
ಮೊದಲನೇ ಹಂತದಲ್ಲಿ ಒಟ್ಟು ೧೧೯೧ ಮನೆಗಳ ನರ‍್ಮಾಣ ಕರ‍್ಯ ಆರಂಭವಾಗಿದ್ದು ಈ ಪೈಕಿ ಬರುವ ದೀಪಾವಳಿ ವೇಳೆಗೆ ೩೦೦ ಮನೆಗಳನ್ನು ನರ‍್ಮಿಸಿ ಫಲಾನುಭವಿಗಳಿಗೆ ನೀಡುವುದಾಗಿ ಸಂಬಂಧಿಸಿದ ಗುತ್ತಿಗೆದಾರರು ಇದೆ ವೇಳೆ ಪ್ರತಿಕ್ರಿಯಿಸಿದರು.ಈ ಸಂರ‍್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಎಸಿ ಗಜಾನನ ಬಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನರ‍್ದೇಶಕ ಈರಣ್ಣ ಬಿರಾದಾರ, ಮಹಾನಗರ ಪಾಲಿಕೆಯ ಉಪ ಆಯುಕ್ತೆ ಸಂತೋಷ ರಾಣಿ, ಡಿಯುಡಿಸಿಯ ಸಿಎಲ್‌ಟಿಸಿ ಹಂಪಮ್ಮ ಸೇರಿದಂತೆ ಇನ್ನೀತರರು ಇದ್ದರು.