ಜಿಲ್ಲೆ

ಕೋವಿಡ್ ಕೇರ್ ಸೆಂಟರ್‌ಗೆ ಡಿಸಿ ಭೇಟಿ

ಮಂಡ್ಯ: ನಗರದ ಹೊರವಲಯದ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯದಲ್ಲಿ ಸ್ಥಾಪಿಸಿರುವ ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ಗೆ ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ಸೋಂಕಿತರೊಡನೆ ನೇರವಾಗಿ ಸಂವಾದಿಸಿ ಮೂಲಸೌಕರ್ಯ ಮತ್ತು ಊಟೋಪಾಚಾರಗಳ ಬಗ್ಗೆ ವಿಚಾರಿಸಿದರು. ಈ ವೇಳೆ ಸೋಂಕಿತರೊಬ್ಬರು ಮಾತನಾಡಿ, ಸರಿಯಾದ ಸಮಯಕ್ಕೆ ತಿಂಡಿ, ಊಟ, ಬಿಸಿನೀರು ಮತ್ತು ಶುಚಿತ್ವವನ್ನು ಸೂಕ್ತ ರೀತಿಯಲ್ಲಿ ಕಲ್ಪಿಸಕೊಡಲಾಗಿದೆ. ಸಿಬ್ಬಂದಿಯೂ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಜವರೇಗೌಡ ಇತರರಿದ್ದರು.