ಕುಶಾಲನಗರ: ಸರ್ಕಾರದ ನಿರ್ದೇಶನದಂತೆ ಕಂದಾಯ ಇಲಾಖೆಯನ್ನು ಪೇಪರ್ ಮುಕ್ತ ಕಚೇರಿಯನ್ನಾಗಿಸಲು ಸಿದ್ಧತೆ ನಡೆಯುತ್ತಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ತಿಳಿಸಿದರು.
ತಾಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಹೊರತುಪಡಿಸಿ ಬೇರೆಲ್ಲವೂ ಇ-ಕಚೇರಿ ಆಗಬೇಕೆನ್ನುವ ಗುರಿ ಹೊಂದಲಾಗಿದೆ. ಅದರಂತೆ ಕಚೇರಿ ಪರಿಶೀಲಿಸಲು ಮತ್ತು ಕೆಲ ಸ್ಥಳಗಳ ಪರಿಶೀಲನಾ ಕಾರ್ಯಕ್ಕಾಗಿ ಅಗಮಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಕುಶಾಲನಗರ ತಹಸೀಲ್ದಾರ್ ಕಿರಣ್ ಗೋರಯ್ಯ, ಆರ್‌ಐ ಸಂತೋಷ, ವಿಎ ಗೌತಮ್ ಇತರರು ಇದ್ದರು.