ವಿಜಯಪುರ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಟಕ್ಕೆ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಬುಧವಾರ ನಡೆದ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಅತೀ ಮಹತ್ವದ್ದಾಗಿದೆ. ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದು ಅತೀ ಅವಶ್ಯ ಎಂದರು.
ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕ ಕುಮಾರಸ್ವಾಮಿ, ಪ್ರಾಚಾರ್ಯ ಜುನ್ನಾ ರಾಮ, ಶಂಕರ ಶಾಸ್ತ್ರೀ, ರಮೇಶ ಚವ್ಹಾಣ್, ಸುವರ್ಣಾ ಸೀಳಿನ್, ಸಾಯಿ ತೇಜಸ್ವಿನಿ, ವಿಠಲ ಚಟ್ಟರಕಿ, ಸಂತೋಷ್ ಹಲವಾಯಿ ಹಾಗೂ ಸೋಮೇಶ್ ಅಲಗುಂಡಗಿ ಉಪಸ್ಥಿತರಿದ್ದರು.
ಶಿಕ್ಷಕಿ ಅನಿತಾ ಜೋಸೆಫ್ ನಿರೂಪಿಸಿದರು. ಹಿರಿಯ ಉಪನ್ಯಾಸಕಿ ಅನಾಮಿಕ ಕುಮಾರಿ ವಂದಿಸಿದರು. ಸಿಮ್ರಾನ್ ಕ್ರೀಡಾ ವರದಿ ವಾಚನ ಮಾಡಿದರು.