ಜಿಲ್ಲೆ

ಜಿಲ್ಲಾಧಿಕಾರಿಗಳಿಂದ ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆ

Gadag - Shivanand Hiremath

ಗದಗ: ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಭೂಮಿ ಪ್ರಕರಣಗಳು, ಆರ್.ಟಿ.ಸಿ.  ಕೋರ್ಟ ಹಾಗೂ ವ್ಯಾಜ್ಯ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಿ ತಂತ್ರಾಂಶದಲ್ಲಿ ದಾಖಲಿಸಲು ಸಂಬಂಧಿತ ತಹಶೀಲ್ದಾರರುಗಳಿಗೆ  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಕಂದಾಯ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬೆಳೆ  ಸಮೀಕ್ಷೆಯನ್ನು ನಿಗದಿತ ಸಮಯದಲ್ಲಿಯೇ ಕೈಗೊಳ್ಳಬೇಕು. ಅಂದಾಗ ಮಾತ್ರ ರೈತರು ವಿಮೆ ಕ್ಲೇಮು ಮಾಡಲು ಅನುÀೂಲವಾಗುತ್ತದೆ.ಋತುವಿನ ಪ್ರತಿಕೂಲಗಳಿಂದ ತಡೆಗಟ್ಟುವ ಬಿತ್ತನೆ  ( preventive sowing)   ಕುರಿತು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ  ಸಭೆ ಮಾಡಿ ರೈತರ ಮುಖಂಡರ ಅಭಿಪ್ರಾಯ ತೆಗೆದುಕೊಂಡು ನಂತರ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಈ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕೆಂದರು.  Land classification  (ಭೂಮಿ ವರ್ಗಿಕರಣ)  ಪ್ರಕ್ರಿಯೆಗೆ ಸಂಬಂಧಿಸಿದಂತೆ ಭೂ ದಾಖಲೆ ಇಲಾಖೆಯ ಅಧಿಕಾರಿಗಳು ಆದಷ್ಟು ಶೀಘ್ರ ಕೈಗೊಳ್ಳಬೇಕು. ರೆಜಿಸ್ಟ್ರಾರ್ ಹಂತದಲ್ಲಿ ಆರ್‍ಟಿ.ಸಿ ಪ್ರಕರಣಗಳು ಇತ್ಯರ್ಥಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು. ಉಪವಿಭಾಗಾಧಿಕಾರಿಗಳ ಹಾಗೂ ತಹಶೀಲ್ದಾರರ ಹಂತದಲ್ಲಿನ  ವಿವಿಧ ಕೋರ್ಟ  ಪ್ರಕರಣಗಳನ್ನು ಇತ್ಯರ್ಥಕ್ಕೆ ಸೂಕ್ತ ಕ್ರಮ ವಹಿಸಲು ಸಲಹೆ ಮಾಡಿದರು. ಆಯಾ ಇಲಾಖೆಯ ಯೋಜನೆಗೆ ಸಂಬಂಧಿಸಿದ ತಂತ್ರಾಂಶದಲ್ಲಿ ಸ್ವೀಕೃತವಾದ ಅರ್ಜಿಗಳು ಸಂಬಂಧಿತ ಇಲಾಖೆ ಅಧಿಕಾರಿಗಳು ಖುದ್ದಾಗಿ ತಾವೇ ಲಾಗಿನ್ ಆಗಿ ಮರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದರು.  

ಭೂಮಿ ಯೋಜನೆಗೆ ಸಂಬಂಧಿಸಿದಂತೆ ಅಗಸ್ಟ 2023 ತಿಂಗಳಲ್ಲಿ 1150 ಅರ್ಜಿಗಳು ಸೇರಿದಂತೆ ಒಟ್ಟಾರೆ 1586 ಅರ್ಜಿಗಳು ಸ್ವೀಕೃತಗೊಂಡಿದ್ದು 871 ಅರ್ಜಿಗಳು ಇತ್ಯರ್ಥಗೊಂಡಿದ್ದು 715  ಅರ್ಜಿಗಳು ಬಾಕಿ ಇವೆ. ತಹಶೀಲ್ದಾರರ ಹಂತದಲ್ಲಿ 161 ನ್ಯಾಯಾಲಯ ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಕೋರ್ಟ ಪ್ರಕರಣಗಳು ಶೇ 83 ರಷ್ಟು ಇತ್ಯರ್ಥಗೊಂಡಿವೆ.  ಆರ್.ಟಿ.ಸಿ. ಮಿಸ್ ಮ್ಯಾಚ್/ ಎಲ್.ಆರ್.ಎಫ್.ಆಫ್ ಪೋಡಿ  ಪ್ರಕರಣಗಳಿಗೆ ಸಂಬಂಧಿಸಿದಂತೆ  717 ಪ್ರಕರಣಗಳ ಪೈಕಿ 366 ಪ್ರಕರಣಗಳು ಇತ್ಯಥಗೊಂಡಿವೆ.  2023-24 ನೇ ಸಾಲಿನ ಮೇ ಅಂತ್ಯದವರೆಗೆ ಜಿಲ್ಲೆಯ 7 ಉಪನೊಂದಣಿ ಕಚೇರಿಗಳಿಂದ 6595 ದಸ್ತಾವೇಜುಗಳಿಗೆ 9,53,04,448 ರೂ.ರಾಜಸ್ವ ಸಂಗ್ರಹಿಸಲಾಗಿದೆ. ನೂತನ ಕಾವೇರಿ 2.0 ತಂತ್ರಾಂಶಕ್ಕೆ ಸಂಬಂಧಿಸಿದಂತೆ  ಜಿಲ್ಲೆಯ 7 ಉಪನೊಂದಣಿ ಕಚೇರಿಗಳಲ್ಲಿ  ಸಾರ್ವಜನಿಕರು ಇದುವರೆಗೂ ಪರಿಶೀಲನೆಗೆ ಆನ್‍ಲೈನ್‍ನಲ್ಲಿ ಉಪನೊಂದಣಾಧಿಕಾರಿಗಳಿಗೆ 5285 ದಸ್ತಾವೇಜುಗಳನ್ನು ಸಲ್ಲಿಸಿದ್ದು, ಉಪನೊಂದಣಾಧಿಕಾರಿಗಳು ದಸ್ತಾವೇಜುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ತಿದ್ದುಪಡಿಗಾಗಿ1812 ದಸ್ತಾವೇಜುಗಳನ್ನು ಹಿಂತಿರುಗಿಸಿದ್ದಾರೆ. ಉಪನೊಂದಣಾಧಿಕಾರಿಗಳಿಂದ ದಸ್ತಾವೇಜುಗಳನ್ನು ಪರಿಶೀಲಿಸಿ ಶುಲ್ಕಗಳ ಪಾವತಿಗೆ ಸಾರ್ವಜನಿಕರಿಗೆ 3670 ಹಿಂದಿರುಗಿಸಲಾಗಿದೆ. ದಸ್ತಾವೇಜುಗಳ ಪರಿಶೀಲನೆಯ ನಂತರ ಶುಲ್ಕ ಪಾವತಿಸಿ ಉಪನೊಂದಣಾದಿಕಾರಿಗಳ ಕಚೇರಿಯಲ್ಲಿ 4109 ದಸ್ತಾವೇಜುಗಳನ್ನು ನೊಂದಣಿ ಮಾಡಿಸಲಾಗಿದೆ ಎಂದು ಸಭೆಯಲ್ಲಿ ಆಯಾ ಇಲಾಖಾಧಿಕಾರಿಳು ಸಭೆಗೆ ಮಾಹಿತಿ ನೀಡಿದರು.  

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಶಶಿಕಾಂತ,  ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಭೂ ದಾಖಲೆಗಳ ಇಲಾಖೆಯ ಅಧಿಕಾರಿ  ತಾಲೂಕಿನ ತಹಶೀಲ್ದಾರರುಗಳು, ಶಿರಸ್ತೇದಾರರು, ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.