ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ತಮಗೆ ನೀಡಿದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ಸೂಚಿಸಿದರು.
ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಕಾನ್ಪರೆನ್ಸ್ ಸಂಭಾಣದಲ್ಲಿ ಜಿಲ್ಲೆಯಲ್ಲಿ ಬಾರಿ ಮಳೆಯಿಂದ ಹಾನಿಯಾದ ಮಾನವ ಪ್ರಾಣಿಗಳು ಮತ್ತು ವಸತಿಗಳು ಮತ್ತು ಬೆಳೆಹಾನಿ ಹಾಗೂ ಎಸ್.ಡಿ. ಎಂ.ಎಫ್. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳಹಾನಿಯಾಗಿದ್ದರೆ ಅಂತಹ ಪ್ರದೇಶಗಳಿಗೆ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದ ಪರಿಹಾರವನ್ನು ನೀಡಿದ ವರದಿಯನ್ನು ನೀಡಬೇಕೆಂದು ಅವರು ಹೇಳಿದರು.
ಜಿಲ್ಲೆಯಲ್ಲಿ ೩ ಲಕ್ಷ ರೈತರು ಬೆಳೆ ವಿಮೆ ಪರಿಹಾರ ಮಾಡಿಸಿಕೊಂಡಿದ್ದಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೀಲ್ ಅವರು ಸಭೆಯ ಗಮನಕ್ಕೆ ತಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ೧ ನೇ ಜನೆವರಿ ೨೦೨೫ ರಿಂದ ಆಗಸ್ಟ್ ೨೦೨೫ ರವರೆಗೆ ವಾಡಿಕೆಯಂತೆ ೪೧೮ ಮಿ.ಮಿ ಮಳೆಯಾಗಬೇಕಾಗಿತ್ತು. ೬೩೨ ಮಿ.ಮೀಟರ್ (ಶೇ.೫೧ ರಷ್ಟು )ಹೆಚ್ಚು ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೮.೯೦ ಲಕ್ಷ್ ಹೇಕ್ಟರ್ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿಯವರೆ ೮.೬೭ ಲಕ್ಷ್ ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ ಜಿಲ್ಲೆಯಲ್ಲಿ ಸತತ ಮಳೆಯಾಗುವ ಕಾರಣ ಕೃಷಿ ಬೆಳೆಗೆ ಹಾನಿಯಾಗುವ ಸಂಭವಿರುತ್ತದೆ ಆದ್ದರಿಂದ ಈಗಾಗಲೇ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಒಳಗೊಂಡAತೆ ಬೆಳೆಹಾನಿ ಜಂಟಿ ಸಮೀಕ್ಷೆ ಮಾಡಲು ಆದೇಶಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬೆಳೆಹಾನಿಯಾದ ಕುರಿತು ೨-೩ ದಿನಗಳಲ್ಲಿ ಜಂಟಿ ಸಮೀಕ್ಷೆ ಮಾಡಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಳೆಗಾಲ ಇರುವ ಕಾರಣದಿಂದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಅಮಾರ್ಜಾದಲ್ಲಿ ೪೫೮..೫೭ ಮೀಟರ್ ಬೆಣ್ಣೆತೋರದಲ್ಲಿ ೪೩೭.೮೦ ಮೀಟರ್, ಚಂದ್ರಪಳ್ಳಿ ೪೮೬.೮ ಗಂಡೋರಿ ನಾಲ ೪೬೫.೫೦.ಮುಲಾಮಾರಿಯಲ್ಲಿ ೪೮೯.೫೫ ನೀರು ಸಂಗ್ರಹವಾಗಿದೆ ಎಂದು ಸಂಬAಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ಮಾಹತಿ ನೀಡಿದರು.
ಸಾರ್ವಜನಿಕರು ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಾಗಿ ಸೆಲ್ಪಿ ತೆಗೆದುಕೊಳ್ಳವುದಾಲಿ ಧನ-ಕರುಗಳನ್ನು ಮೇಯಿಸಲು ನದಿ ತೀರದಲ್ಲಿ ಬಿಟ್ಟು ನಿರ್ಲಕ್ಷö್ಯ ವಹಿಸಬಾರದು ಅತಿವೃಷ್ಟಿಯಿಂದ ಸಮಸ್ಯೆಯಾದಂತಹ ಗ್ರಾಮಗಳಲ್ಲಿ ಡಂಗುರವನ್ನು ಸಾರುವುದರ ಮೂಲಕ ಜಾಗೃತಿ ಮೂಡಿಸುವ ಮುಖಾಂತರ ಸಂಬAಧಪಟ್ಟ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಿಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಶಾಲಾ ಕಾಲೇಜ್‌ಗಳು ಅಂಗನವಾಡಿ ಕಟ್ಟಡಗಳು ಶಿಥ¯ಗೊಂಡಿರುವ ಕಟ್ಟಡಗಳನ್ನು ಗುರುತಿಸಿ ಅಲ್ಲಿ ವಾಸಿಸಿರುವ ಜನರು ಅಥವಾ ವಿದ್ಯಾರ್ಥಿಗಳಿಗೆ ಬೇರೆ ಕಡೆ ಸ್ಥಳಾಂತರಿಸಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅತಿವೃಷ್ಟಿಯಿಂದ ಹಾನಿಗಳನ್ನು ತಪ್ಪಿಸಲು ಪ್ರತಿಯೊಂದು ತಾಲ್ಲೂಕುಗಳಲ್ಲಿ ಅಧಿಕಾರಿಗಳು ಗುರುತಿಸಿದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮವಹಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಮಳೆ ಜಾಸ್ತಿಯಾಗುತ್ತಿರುವುದರಿಂದ ಅನೇಕ ಸಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿದ್ದು, ಸೂಳ್ಳೆಗಳ ಉತ್ಪತ್ತಿಯಾಗದಂತೆ ಡೆಂಗ್ಯೂ,. ಚಿಕನ್ ಗುನ್ಯಾ, ರೋಗಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಅವರಿಗೆ ಸೂಚಿಸಿದರು.
ಕಲಬುರಗಿ ಜಿಲ್ಲೆಗೆ ಸಂಬAಧಪಟ್ಟ ರಸ್ತೆಗಳು, ಚರಂಡಿಗಳು, ಪಕ್ಕದಲ್ಲಿ ಪೈಪ್‌ಲೈನ್ ದುರಸ್ತಿಗೊಳಿಸಬೇಕು ನಗರವನ್ನು ಸ್ವಚತೆಯನ್ನು ಕಾಪಾಡಿಕೊಂಡು ಹೋಗಲು ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ ಶಿಂಧೆ ಅವರಿಗೆ ನಿರ್ದೇಶನ ನೀಡಿದರು
ಪಾಲಿಕೆ ಆಯುಕ್ತರಾದ ಅವಿನಾಶ ಶಿಂಧೆ ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ವಾರ್ಡ್ ವೈಸ್ ಟಾಸ್ಕಪೋರ್ಸಗಳನ್ನು ಮಾಡಲಾಗಿದ್ದು, ರೋಡ್ ದುರಸ್ತಿ ಕೆಲಸ ಕಾರ್ಯಗಳ ಕೆಲಸ ನಡೆದಿದ್ದು, ಕುಡಿಯುವ ನೀರು ಕಲುಷಿತವಾಗದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಭೀಮಾನದಿ ಹೆಚ್ಚಿನ ನೀರು ಸಂಗ್ರಹಣೆಯಾದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೇತುವೆಗಳ ಮೇಲೆ ಎರಡು ಕಡೆಗೂ ಬ್ಯಾರಿಕೇಡ್ ಅಳವಡಿಸಿ ಪೋಲಿಸ್ ಸಿಬ್ಬಂದಿ ನಿಯೋಜಿಸಬೇಕು ಅತಿವೃಷ್ಟಿಯಿಂದಾಗಿ ಯಾವುದೇ ರೀತಿಯಾಗಿ ಮಾನವ ಹಾನಿ ಮತ್ತು ಪ್ರಾಣ ಹಾನಿಯಾಗದಂತೆ ಎಲ್ಲ ಇಲಾಖೆಗಳು ಪರಸ್ಪರ ಸಹಕಾರದಿಂದ ಮುಂಜಾಗ್ರತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆಹಾನಿ ಪರಿಹಾರ ನೀಡಿದವರಿಗೆ ಜಿಪಿಎಸ್‌ನಲ್ಲಿ ಪೋಟೋ ಮತ್ತು ಮಾಹಿತಿಯನ್ನು ಪರಿಹಾರ ಪೋರ್ಟಲ್ ನಲ್ಲಿ ಅಗತ್ಯ ಮಾಹಿತಿ ವಿವರ ನಮೋದಿಸಿ ಮಾಹಿತಿಯನ್ನು ನೀಡಬೇಕೆಂದು ಅವರು ಹೇಳಿದರು. ಮತ್ತು ಸಂಬAಧಪಟ್ಟ ನೋಡಲ್ ಆಫೀಸರ್‌ಗಳು ಕಾಳಜಿ ಕೇಂದ್ರಗಳಿಗೆ ಭೇಟಿ ಮುಂಜಾಗ್ರತೆ ಕ್ರಮವಹಿಸಬೇಕೆಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಅವರು ಮಾತನಾಡಿ, ಅತಿವೃಷ್ಟಿಯಿಂದಾಗಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಬೇಕೆಂದು ಮತ್ತು ಸೇತುವೆಗಳÀ ಮೇಲೆ ಬ್ಯಾರಿಕೇಡ್ ಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ತಹಶೀಲ್ದಾರಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳೋಂದಿಗೆ. ಜಿಲ್ಲಾಮಟ್ಟ ಅಧಿಕಾರಿಗಳು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.