ಮಡಿಕೇರಿ:
ಜಿಲ್ಲಾಧಿಕಾರಿ ವೆಂಕಟ್ ರಾಜಾ ಶನಿವಾರ ಸಂಜೆ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ ಯೋಜನಾ ಕಾಮಗಾರಿ ಪರಿಶೀಲಿಸಿದರು. ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಈ ಸಂದರ್ಭ ಜಿಲ್ಲಾಧಿಕಾರಿ ಜತೆಗೆ ಇದ್ದರು.
ನಗರಸಭೆ ವ್ಯಾಪ್ತಿಯಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ರಾಜಕಾಲುವೆಗೆ ನಿರ್ಮಿಸಲಾದ ಮಳೆ ನೀರು ಚರಂಡಿ, ವಾರ್ಡ್ ನಂ 1 ರ ಆನಂದ್ ಮನೆಯಿಂದ ಸುಮತ್ ಮನೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವಾರ್ಡ್ ನಂ.5 ರಲ್ಲಿ ಆಟೋ ಯಲ್ಲಪ್ಪ ಮನೆಯಿಂದ ಕಸ್ತೂರಿ ಮನೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು ಹಾಗೂ ಸ್ಥಳದಲ್ಲಿಯೇ ಕೋರ್ ಕಟ್ಟಿಂಗ್ ಮಾಡಿಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.
ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸಿ ಕಾಮಗಾರಿ ನಿರ್ವಹಿಸುವಂತೆ ಕಾಮಗಾರಿಗಳ ಉಸ್ತುವಾರಿ ಹೊತ್ತಿರುವ ಕಾರ್ಯಪಾಲಕ ಅಭಿಯಂತರರು ಮತ್ತು ಪಿ.ಎಂ.ಸಿರವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಬಸಪ್ಪ, ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಕುಮಾರ್, ಪೌರಾಯುಕ್ತ ವಿಜಯ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪ್ರಭಾರ) ಹೇಮಕುಮಾರ್ ಮತ್ತು ಸಹಾಯಕ ಅಭಿಯಂತರ ರಂಗರಾಮ್ ಇತರರು ಇದ್ದರು.