ಜಿಲ್ಲೆ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕುಮಟಾದ ಶಿಳ್ಳೆಗುಡ್ಡದಲ್ಲಿ ಸ್ಥಳ ಪರಿಶೀಲಿಸಿದ ಡಿಸಿ

ಕುಮಟಾ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಲವೆಡೆ ಅರಣ್ಯ ಇಲಾಖೆ ಜಾಗವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ಜಿಲ್ಲಾಧಿಕಾರಿ ಭೇಟಿ ಕುರಿತು ಸುದ್ದಿಗಾರರಿಗೆ ವಿವರಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ, ತಾಲೂಕಿನ ದೀವಗಿ ಸಮೀಪದ ಶಿಳ್ಳೆಗುಡ್ಡ, ಕಲಭಾಗದ ವಿದ್ಯಾಗಿರಿ ಆಸುಪಾಸಿನ ಪ್ರದೇಶ, ಕೊಂಕಣ ರೈಲ್ವೆ ನಿಲ್ದಾಣದ ಸುತ್ತಮುತ್ತ ಮತ್ತು ಮಿರ್ಜಾನದ ಎತ್ತಿನಬೈಲ್ ಪ್ರದೇಶವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದ್ದಾರೆ. ಸೂಕ್ತ ಜಾಗ ಯಾವುದು ಎಂದು ಇನ್ನೂ ಅಂತಿಮಗೊಳಿಸಲಾಗಿಲ್ಲ. ಜಾಗದ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಎಎಫ್ ಜಿ.ಕೆ. ಶೇಟ್, ಹಿರೇಗುತ್ತಿ ಆರ್​ಎಫ್​ಒ ಪ್ರವೀಣ ನಾಯಕ, ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.