ಜಿಲ್ಲೆ

ಕುಡಿಯುವ ನೀರಿನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಡಿಸಿ ಸಭೆ

 ರಾಯಚೂರು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಗತ್ಯತೆ ಇದ್ದು, ಜಿಲ್ಲೆಯ ಪ್ರತಿಯೊಂದು ಹಳ್ಳಿಗಳು ಸರ‍್ಪಕ ನೀರು ಪೂರೈಕೆಗೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ, ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟನಿಟ್ಟಿನ ನರ‍್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಭವನದಲ್ಲಿ ಶನಿವಾರ ಕುಡಿಯುವ ನೀರಿನ ಕುರಿತು ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ  ಮಳೆ ಬಿದ್ದಿರುವುದರಿಂದ ಬಿಸಿಲು ಒಂದು ಹಂತಕ್ಕೆ ಬಂದಿದೆ.

ಈ ವೇಳೆ ಜನತೆಗೆ ಸ್ಪಂದಿಸಬೇಕು. ಸರ‍್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಮುಂಜಾಗ್ರತೆ ಕ್ರಮವಾಗಿ ಪರೀಕ್ಷೆಗೊಳಪಡಿಸಿಯೇ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದರು.

 ರಾಯಚೂರ, ಸಿರವಾರ, ಮಸ್ಕಿ, ದೇವದರ‍್ಗ, ಸಿಂಧನೂರ ಮತ್ತು ಮಾನ್ವಿಯ ತಹಸೀಲ್ದಾರರು ಹಾಗೂ ತಾಪಂ ಕರ‍್ಯ ನರ‍್ವಹಣಾಧಿಕಾರಿಗಳು

ಬರಿ ಕಚೇರಿಗಳಿಗೆ ಸೀಮಿತವಾಗದೇ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ನಿಯಮಿತವಾಗಿ ಪ್ರವಾಸ ಮಾಡಿ ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ನಿಗಾವಹಿಸಬೇಕೆಂದು ಸೂಚನೆ ನೀಡಿದರು.

ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಈ ವೇಳೆ ಸಮನ್ವಯದಿಂದ ಕರ‍್ಯ ಮಾಡಬೇಕು. ಸಹಾಯಕ ಆಯುಕ್ತರು ಮತ್ತು ನೋಡಲ್ ಅಧಿಕಾರಿಗಳು ಪ್ರತಿ ವಾರ ಸಭೆ ನಡೆಸಿ ಕುಡಿಯುವ ನೀರು ಸರಬರಾಜಿನ ಬಗ್ಗೆ ರ‍್ಚಿಸಬೇಕು.

ಈ ಬಗ್ಗೆ ಸಭಾ ನಡಾವಳಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ನರ‍್ದೇಶನ ನೀಡಿದರು.

ಜಿಪಂ ಸಿಇಒ ರಾಹುಲ್ ತುಕಾರಂ ಪಾಂಡ್ವೆ ಮಾತನಾಡಿ,ಎಲ್ಲ ಹಳ್ಳಿಗಳಲ್ಲಿ ನಿಯಮಿತವಾಗಿ ನೀರು ಪರೀಕ್ಷಿಸಿಯೇ ಜನರಿಗೆ ನೀರು ಪೂರೈಕೆ ಮಾಡಬೇಕು.

ಯಾವುದೇ ಹಳ್ಳಿಗಳಲ್ಲಿ ವಾಂತಿ ಬೇಧಿ ಪ್ರಕರಣಗಳು ದಾಖಲಾಗದಂತೆ ಮುಂಜಾಗ್ರತೆ ವಹಿಸಬೇಕು. ಪಿಡಿಓಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನರ‍್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ನರ‍್ದೇಶನ ನೀಡಿದರು. ಎಲ್ಲ ಹಳ್ಳಿಗಳಲ್ಲಿ ನೀರು ಸರಬರಾಜು ಸರಿಯಾಗಿ ಆಗಬೇಕು. ಪೈಪು ಒಡೆದು ನೀರು ಎಲ್ಲೂ ಪೋಲಾಗಬಾರದು.

ಎಲ್ಲಾ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕರ‍್ಯನರ‍್ವಹಿಸಬೇಕು. ಈ ಬಗ್ಗೆ ಯಾವುದೇ ದೂರುಗಳು ಬರಕೂಡದು.

ನೀರು ಸರಿಯಿಲ್ಲದ ಕಡೆಗಳಲ್ಲಿ ಜನರು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು ಎಂದು ವ್ಯಾಪಕ ಪ್ರಚಾರ ಮಾಡಬೇಕು. ಕ್ಲೊರಿನೇಶನ್ ಕರ‍್ಯವನ್ನು ನಿರಂತರವಾಗಿ ಮಾಡಬೇಕು ಎಂದು ಸಿಇಓ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂರ‍್ಭದಲ್ಲಿ ಎಡಿಸಿ ಶಿವಾನಂದ ಭಜಂತ್ರಿ,ಎಸಿ ಗಜಾನನ ಬಾಳೆ, ತಹಸೀಲ್ದಾರ್ ಸುರೇಶ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.