ಜಿಲ್ಲೆ

ಬೋಟ್‌ಹೌಸ್ ಚಲಾಯಿಸಿದ ಡಿಸಿ

Udupi

ಉಡುಪಿ: ಜಿಲ್ಲಾಧಿಕಾರಿ ಜಿ. ಜಗದೀಶ್ ಭಾನುವಾರ ಕೆಮ್ಮಣ್ಣು ಹೂಡೆಯಲ್ಲಿ ಬೋಟ್ ಹೌಸ್ ಚಲಾಯಿಸುವ ಮೂಲಕ ಗಮನ ಸೆಳೆದರು.

ಭಾನುವಾರ ರಜೆ ಹಿನ್ನೆಲೆಯಲ್ಲಿ ಪತ್ನಿ, ಮಕ್ಕಳೊಂದಿಗೆ ಬೋಟ್‌ಹೌಸ್‌ಗೆ ತೆರೆಳಿದ ಜಗದೀಶ್ ಚಾಲಕನಿಂದ ಮಾಹಿತಿ ಪಡೆದು ಸ್ವಲ್ಪ್ಪ ಹೊತ್ತು ಬೋಟ್ ಚಲಾಯಿಸಿದರು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು, ಬೋಟ್‌ಹೌಸ್‌ಗಳಿಗೆ ಸಾಕಷ್ಟು ಅವಕಾಶವಿದ್ದು, ಇದಕ್ಕಾಗಿ ಇತರೆ ರಾಜ್ಯಗಳಿಗೆ ಹೋಗಬೇಕಾಗಿಲ್ಲ. ನಮ್ಮಲ್ಲಿ ರಮಣೀಯ ತಾಣಗಳಿದ್ದು, ಇಲ್ಲೇ ಆನಂದಿಸಬಹುದು ಎಂದು ಡಿಸಿ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಬೋಟ್ ಚಲಾಯಿಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಈ ವೇಳೆ ಜಿಲ್ಲಾಧಿಕಾರಿ ಮಾಸ್ಕ್ ಧರಿಸದಿರುವುದನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.