ಕೊಪ್ಪಳದಲ್ಲಿ ಡಿಸಿ ನಲಿನ್‌ಅತುಲ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ವಿಜಿಲೆನ್ಸ್ ಸಮಿತಿ ಸಭೆಯ ಇತ್ತೀಚೆಗೆ ನಡೆಯಿತು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳಿದ್ದರು. 
ಜಿಲ್ಲೆ

ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ:ಡಿಸಿ ನಲಿನ್ ಅತುಲ್ ಸೂಚನೆ

DC DIRECTED OFFICERS CLEANING WORKERS MEETING KOPPAL

Kopala - Raveendra V K

ಕೊಪ್ಪಳ: ಸಫಾಯಿ ಕರ್ಮಚಾರಿಗಳಿಗೆ ವೈದ್ಯಕೀಯ ವೆಚ್ಚ ಮಂಜೂರು, ಬಡ್ತಿ ಸೇರಿ ಇತರ ಸೌಲಭ್ಯಗಳನ್ನು ವಿಳಂಬ ಇಲ್ಲದಂತೆ ಕಲ್ಪಿಸಿ ಎಂದು ಡಿಸಿ ನಲಿನ್ ಅತುಲ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ವಿಜಿಲೆನ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಗರಸಭೆ, ಪುರಸಭೆ, ಪಪಂಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳು ಇರುವಂತೆ ನೋಡಿಕೊಳ್ಳಿ. ಕೊರತೆ ಇರುವೆಡೆ ನಿಯಮಾನುಸಾರ ಖರೀದಿಸಿ. ಮ್ಯಾನುಯೆಲ್ ಸ್ಕ್ಯಾವೆಂಜರ್‌ಪದ್ಧತಿ ನಿಷೇಧ ಬಗ್ಗೆ ಜಾಗೃತಿ ಮೂಡಿಸಿ.

ಪೌರ ಕಾರ್ಮಿಕರಿಗೆ ನಿಯಮಿತವಾಗಿ ವೇತನ ಪಾವತಿಸಿ. ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಿ. ಉಪಾಹಾರ, ಕೈ ಗವಸು, ಬೂಟ್ ವಿತರಿಸಿ. ಆಹಾರ ಗುಣಮಟ್ಟದಿಂದ ಕೂಡಿರಲಿ ಎಂದು ನಿರ್ದೇಶಿಸಿದರು.

ಸಮಿತಿ ಸದಸ್ಯ ರಗಡಪ್ಪ ಹುಲಿಹೈದರ್ ಮಾತನಾಡಿ, ನಗರದಲ್ಲಿ ಗುಣಮಟ್ಟದ ಸೋಲಾರ್ ದೀಪ ಅಳವಡಿಸಿ. ರಸ್ತೆಗಳನ್ನು ಸ್ವಚ್ಛಗೊಳಿಸಿ. ಒಳ ಚರಂಡಿ ಕಾಮಗಾರಿ ಕೈಗೊಳ್ಳಿ. ಹೈಮಾಸ್ಟ್ ದೀಪಗಳನ್ನು ನಿರ್ವಹಣೆ ಮಾಡಿ.

ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ಕಲ್ಪಿಸಿ. ಸೇವೆಯಲ್ಲಿರುವ ದಿನಗೂಲಿ ನೌಕರರು ಮರಣಿಸಿದಲ್ಲಿ ಕುಟುಂಬದವರಿಗೆ ತಾತ್ಕಾಲಿಕ ಉದ್ಯೋಗ ನೀಡುವಂತೆ ಒತ್ತಾಯಿಸಿದರು.

ಕಾಶಪ್ಪ ಚಲವಾದಿ, ಪೌರ ಕಾರ್ಮಿಕ ನೌಕರರ ವೇತನದಲ್ಲಿ ಕಡಿತಗೊಂಡ ಇಎಸ್‌ಐ ಮತ್ತು ಇಪಿಎಫ್ ಹಣವನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಬೇಕು. ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಪ್ರತಿ ತಿಂಗಳು ಸಂಕಷ್ಟ ಭತ್ಯೆ ನೀಡುವಂತೆ ತಿಳಿಸಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳಿದ್ದರು.