ಜಿಲ್ಲೆ

ಮತ ಎಣಿಕಾ ಕೇಂದ್ರ ಸಿದ್ಧತೆ ಪರಿಶೀಲಿಸಿದ ಡಿಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಿಮಿತ್ತ ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೈಗೊಂಡಿರುವ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಮಂಗಳವಾರ ಪರಿಶೀಲನೆ ನಡೆಸಿದರು.
ಜೂ. 4ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಪ್ರತಿ ವಿಧಾನಸಭಾ ಮತೇತ್ರವಾರು ಸ್ಥಾಪಿಸಿರುವ ಮತ ಎಣಿಕಾ ಕೊಠಡಿ, ಮತ ಎಣಿಕಾ ಸಿಬ್ಬಂದಿ ಸ್ಥಳ, ಏಜಂಟರ ಸ್ಥಳ, ಸಹಾಯಕ ಚುನಾವಣಾಧಿಕಾರಿಗಳ ಸಿದ್ಧತೆ ಪರಿಶೀಲಿಸಿದರು. ಸ್ಟ್ರಾಂಗ್​ ರೂಂ ಭದ್ರತೆ ವೀಸಿದರು.
ನಂತರ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಟಿವಿ ವ್ಯವಸ್ಥೆ, ವೈೈ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಊಟೋಪಚಾರ, ವಾಹನಗಳ ನಿಲುಗಡೆ, ಸಂಚಾರ ಮಾರ್ಗ ಸೇರಿ ಇತರ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಅವರು, ಎಣಿಕೆ ಕಾರ್ಯ ರ್ಪೂಣಗೊಳ್ಳುವವರೆಗೂ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ವ್ಯವಸ್ಥಾಪಕರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಮಾಧ್ಯಮ ಕೇಂದ್ರದ ನೋಡಲ್​ ಅಧಿಕಾರಿ ಡಾ. ಡಿ.ಎಚ್​. ಹೂಗಾರ, ನಿಮಿರ್ತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ, ಇತರರು ಇದ್ದರು.