DAYASAGAR PATIL 
ಜಿಲ್ಲೆ

ಅಟಾರಿ ಸಂಸ್ಥೆಗೆ ದಯಾಸಾಗರ ಪಾಟೀಲ ನಾಮ ನಿರ್ದೇಶನ

Vijyapura - Parsuram Bhasagi

ವಿಜಯಪುರ: ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿಯಲ್ಲಿ ಬರುವ ಕೃಷಿ ತಂತ್ರಜ್ಞಾನ ಅಳವಡಿಕಾ ಸಂಶೋಧನಾ ಸಂಸ್ಥೆ (ಅಟಾರಿ) ಬೆಂಗಳೂರು ವಲಯ-11ರ ನಿರ್ವಹಣಾ ಸಮಿತಿ ಸದಸ್ಯರನ್ನಾಗಿ ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಅವನ್ನು ನಾಮ ನಿರ್ದೇಶನ ಮಾಡಲಾಗಿದೆ.

ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದು, ದಯಾಸಾಗರ ಪಾಟೀಲ ಅವರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ರೈತರ ಹಾಗೂ ರೈತ ಮಹಿಳೆಯರ ಸವಾಂಗೀಣ ಕೌಶಲಾಭಿವೃದ್ಧಿ ಮತ್ತು ಇವರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಟಾರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ದಯಾಸಾಗರ ಪಾಟೀಲ ನಾಮ ನಿರ್ದೇಶನಗೊಂಡಿದ್ದು, ಅವರ ಕಾರ್ಯವೈಖರಿ ಯಶಸ್ಸು ಕಾಣಲಿ ಎಂದು ಕೇಂದ್ರ ಸಚಿವ ಅರ್ಜುನ ಮುಂಡಾ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.