ವಿಜಯಪುರದ ಪದ್ಮಾಂಜಲಿ ಶಾಲೆ ಆವರಣದಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಜಿ.ಟಿ. ಪಾಟೀಲ ಅವರಿಗೆ ಸನ್ಮಾನಿಸಿ ಸಿಹಿ ತಿನ್ನಿಸಲಾಯಿತು. ಅನಿಲ ನಾಯಕ, ಅಶ್ವಿನಿ ಬಿರಾದಾರ ಮತ್ತಿತರರಿದ್ದಾರೆ. 
ಜಿಲ್ಲೆ

ಪದ್ಮಾಂಜಲಿ ಶಾಲೆಯಲ್ಲಿ ದಿನಾಚರಣೆ

ವಿಜಯಪುರ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಶ್ರೇಷ್ಠ ವೈದ್ಯ ಬಿ.ಸಿ. ರಾಯ್​ ಅವರು ವೈದ್ಯಕಿಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸ್ಮರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜು. 1 ರಂದು ರಾಷ್ಟ್ರೀಯ ವೈದ್ಯ ದಿನ ಆಚರಿಸಲಾಗುತ್ತಿದೆ ಎಂದು ಶಾಲೆ ಚೇರ್ಮನ್​ ಡಾ. ಜಿ.ಟಿ. ಪಾಟೀಲ ಹೇಳಿದರು.

ನಗರದ ಪದ್ಮಾಂಜಲಿ ಶಾಲೆ ಆವರಣದಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೈದ್ಯಕಿಯ ಕ್ಷೇತ್ರಕ್ಕೆ ಬಿ.ಸಿ. ರಾಯ್​ ಅವರ ಕೊಡುಗೆ ಅಪಾರ. ಅವರು ಮೆಡಿಕಲ್​ ಕೌನ್ಸಿಲ್​ ಆಫ್​ ಇಂಡಿಯಾ ಹಾಗೂ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು. ಶಾಲೆಯ ಅನಿಲ ನಾಯಕ, ಅಶ್ವಿನಿ ಬಿರಾದಾರ ಸ್ವಾಗತಿ, ನಿರೂಪಿಸಿದರು.