ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಆತಿಥೇಯ ಕರ್ನಾಟಕ ಹಾಗೂ ಪ್ರವಾಸಿ ತಂಡ ತಮಿಳುನಾಡು ನಡುವಿನ ಕರ್ನಲ್ ಸಿ.ಕೆ. ನಾಯ್ಡು (23ವಯೋಮಿತಿ) ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಲೀಗ್ ಪಂದ್ಯದ ಮೊದಲ ದಿನದ ಆಟ ನಡೆಯಲಿಲ್ಲ.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಚತುರ್ದಿನ ಪಂದ್ಯ ಭಾನುವಾರ ಆರಂಭಗೊಳ್ಳಬೇಕಿತ್ತು. ಹಿಂದಿನ ಎರಡು ದಿನ ರಾತ್ರಿ ವೇಳೆ ಸುರಿದ ಮಳೆಯಿಂದ ಮೈದಾನ ಒದ್ದೆಯಾಗಿದ್ದ ಕಾರಣ ಮೊದಲ ದಿನದ ಆಟವನ್ನು ರದ್ದುಪಡಿಸಲಾಯಿತು. ಮಧ್ಯಾಹ್ನ 3.30ಕ್ಕೆ ನಾಲ್ಕನೇ ಹಾಗೂ ಕೊನೆಯ ಬಾರಿ ಮೈದಾನವನ್ನು ಪರಿಶೀಲಿಸಿದ ಬಳಿಕ ಅಂಪೈರ್ಗಳು ದಿನದ ಆಟವನ್ನು ರದ್ದು ಪಡಿಸಿದರು. ಇಂದು ಟಾಸ್ ಸಹ ನಡೆಯಲಿಲ್ಲ.
ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಗರದಲ್ಲಿ ಮಳೆ ಸುರಿಯಲಿಲ್ಲ. ರಾತ್ರಿ ವೇಳೆ ಮಳೆ ಬರದಿದ್ದರೆ ಸೋಮವಾರ ಆಟ ನಡೆಯುವ ಸಾಧ್ಯತೆಗಳಿವೆ.