ದಾವಣಗೆರೆ: ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿ ಮಹಾದೇವಪ್ಪ ವೃತ್ತದ ಆಸುಪಾಸಿನ ರಸ್ತೆ, ವೃತ್ತಗಳಲ್ಲಿ ವಿದ್ಯರ‍್ಥಿ-ಯುವಜನರದ್ದೇ ಹವಾ. ಕೆಲವರ ಕೈಗಳಲ್ಲಿ ಘೋಷಣಾ ಫಲಕಗಳು ಮೌನ ಸದ್ದು ಮಾಡಿದರೆ, ಬಿಳಿ ಟೊಪ್ಪಿಗೆ ಧರಿಸಿದ್ದ ಇತರರು ಗಂಭೀರ ಹೆಜ್ಜೆ ಹಾಕಿದರು..
ಜಿಲ್ಲಾಡಳಿತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಭಾನುವಾರ ಆರಂಭವಾಗಲಿರುವ ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ, ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದ ಸನ್ನಿವೇಶವಿದು.
ಮೋತಿ ವೀರಪ್ಪ ಕಾಲೇಜು ಮೈದಾನ ಆವರಣದಿಂದ ಆರಂಭವಾದ ಜಾಥಾ, ಚಿಗಟೇರಿ ಆಸ್ಪತ್ರೆ ರಸ್ತೆ, ವಿದ್ಯರ‍್ಥಿಭವನ, ಡಾ: ಬಿ.ಆರ್.ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಎವಿಕೆ ರಸ್ತೆಯ ಮೂಲಕ ಮತ್ತೆ ಮೋತಿ ವೀರಪ್ಪ ಕಾಲೇಜಿಗೆ ಮರಳಿತು.
ಗುಂಡಿ ಮಹದೇವಪ್ಪ ವೃತ್ತದ ಬಳಿ ಆಗಸದಲ್ಲಿ ಬಣ್ಣದ ಬೆಲೂನ್‌ಗಳನ್ನು ಹಾರಿಬಿಡುವುದು ಹಾಗೂ ಧ್ವಜ ತೋರಿಸುವ ಮೂಲಕ ಮೇಯರ್ ಕೆ.ಚಮನ್‌ಸಾಬ್ ಜಾಥಾಕ್ಕೆ ಚಾಲನೆ ನೀಡಿದರು. ಇದೇ ವೇಳೆ ಯುವಜನೋತ್ಸವಕ್ಕೆಂದು ಸಿದ್ಧಪಡಿಸಿದ ಯುವಗೀತೆಯ ವೀಡಿಯೋ ಬಿಡುಗಡೆ ಮಾಡಿದರು.
ಮೋತಿ ವೀರಪ್ಪ ಕಾಲೇಜು, ಎವಿಕೆ, ಎಆರ್‌ಜಿ, ರ‍್ಕಾರಿ ಪ್ರಥಮ ರ‍್ಜೆ, ಸೇಂಟ್ ಪಾಲ್ಸ್, ರ‍್ಕಾರಿ ಪಿಯು ಕಾಲೇಜು, ಧರಾಮ, ತಿಮ್ಮಾರೆಡ್ಡಿ, ಮಹಿಳಾ ಸೇವಾ ಸಮಾಜ, ಆರ್‌ಜಿ ಕಾಲೇಜು, ಎಜಿಬಿ, ಸೀತಮ್ಮ, ಸರ್ ಎಂ.ವಿ, ಬಾಪೂಜಿ ಪಾಲಿಟೆಕ್ನಿಕ್, ಸಿದ್ಧಗಂಗಾ ಕಾಲೇಜು, ಡಿ. ಮಂಜುನಾಥ ಮೊದಲಾದ ಕಾಲೇಜುಗಳ ವಿದ್ಯರ‍್ಥಿಗಳು ಜಾಥಾದಲ್ಲಿ ಹೆಜ್ಜೆಯಾದರು.
ಶಾಸಕ ಬಿ.ಪಿ.ಹರೀಶ್ ಹೊರತಾಗಿ ಜಿಲ್ಲೆಯ ಬೇರ‌್ಯಾವ ಜನಪ್ರತಿನಿಧಿಗಳು ಜಾಥಾದಲ್ಲಿ ಭಾಗಿಯಾಗಿರಲಿಲ್ಲ. ಪಾಲಿಕೆ ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯೆ ಸವಿತಾ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಡಿ.ಎಸ್.ಆಶಾ, ಎಡಿಸಿ ಪಿ.ಎನ್. ಲೋಕೇಶ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಉಪಕರ‍್ಯರ‍್ಶಿ ಕೃಷ್ಣನಾಯ್ಕ, ಸಿಪಿಒ ಮಲ್ಲಾನಾಯ್ಕ, ಎಎಸ್ಪಿಗಳಾದ ಮಂಜುನಾಥ್, ವಿಜಯಕುಮಾರ್ ಎಂ. ಸಂತೋಷ್, ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಪಾಲಿಕೆ ಆಯುಕ್ತೆ ರೇಣುಕಾ, ಕ್ರೀಡಾ ಇಲಾಖೆ ಸಹಾಯಕ ನರ‍್ದೇಶಕಿ ರೇಣುಕಾ, ಡಿಡಿಪಿಐ ಜಿ. ಕೊಟ್ರೇಶ್, ಡಿಡಿಪಿಯು ಜಿ. ಕರಿಸಿದ್ದಪ್ಪ, ಡಯಟ್ ಪ್ರಾಚರ‍್ಯೆ ಗೀತಾ, ಜಿಲ್ಲಾ ಅರಣ್ಯಾಧಿಕಾರಿ ಶಶಿಧರ್, ಡಿಆರ್‌ಸಿಎಸ್ ಮಧು ಶ್ರೀನಿವಾಸ್, ಮುಖಂಡರಾದ ಮಾಗಾನಹಳ್ಳಿ ಬಿ.ಕೆ. ಮಂಜುನಾಥ್, ಗಣೇಶ್ ಹುಲ್ಮನಿ, ರತನ್, ಎಲ್.ಎಚ್.ಸಾಗರ್, ಶ್ರೀಕಾಂತ ಬಗೇರ, ಅನಿಲ್‌ಗೌಡ, ರಾಘವೇಂದ್ರ ಗೌಡ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
* ಗಮನ ಸೆಳೆದ ಫಲಕಗಳು*
೩ ಅಡಿ ಅಗೆದು ಗಿಡ ನೆಟ್ಟಿದ್ದರೆ ಇವಾಗ ೧೦೦೦ ಅಡಿ ತೆಗೆದು ಬೋರ್ ಕೊರೆಯುವ ಅವಶ್ಯಕತೆ ಇರುತ್ತಿರಲಿಲ್ಲ, ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದೆ ನಾವೆಲ್ಲಿ?, ಭೂಮಿ ನಮ್ಮ ಹೆತ್ತ ತಾಯಿ, ಅದನ್ನು ರಕ್ಷಿಸುವುದು ನಮ್ಮ ರ‍್ತವ್ಯ. ಯೋಚನೆಗಳನ್ನು ಹರಿಯಲು ಬಿಡಿ, ನೀರನಲ್ಲ, ನೀರು ಅತ್ಯಮೂಲ್ಯ. ಪ್ರಕೃತಿಯನ್ನು ತಾಯಿಯೆಂದು ಪೂಜಿಸಿ, ದೇವರೆಂದು ಗೌರವಿಸಿ, ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಪರಿಸರ ಸಂರಕ್ಷಿಸಿ, ಮತದಾನ ನಮ್ಮ ಜವಾಬ್ದಾರಿ ದೇಶದ ಭವಿಷ್ಯದ ರಹದಾರಿ, ಗೋ ಗ್ರೀನ್ ಬ್ರೀತ್ ಕ್ಲೀನ್, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ, ಅವಸರದ ಹಾದಿ ಜೀವನವೇ ಸಮಾಧಿ... ಮೊದಲಾದ ಘೋಷಣಾ ಫಲಕಗಳು ದಾರಿಯುದ್ದಕೂ ನೋಡುಗರ ಗಮನ ಸೆಳೆದವು.
---