ಜಿಲ್ಲೆ

ಸಂಶೋಧನಾ ವಿಷಯಗಳಿಂದ ಜ್ಞಾನ ವಿಸ್ತರಣೆ    ಡಾ.ಎಸ್. ರಾಮಚಂದ್ರಪ್ಪ ಹೇಳಿಕೆ   ವಿದ್ಯಾರ್ಥಿ ಕಾರ್ಯಾಗಾರ

ಡಿ. ಎಂ. ಮಹೇಶ್

ದಾವಣಗೆರೆ: ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆ ಹಾಗೂ ಇತರರೊಂದಿಗೆ ಕಲಿಕೆ ಹಂಚಿಕೊಳ್ಳಲು ಸಂಶೋಧನಾ ವಿಷಯಗಳು ನೆರವಾಗಲಿವೆ ಎಂದು ದಾವಣಗೆರೆ ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್. ರಾಮಚಂದ್ರಪ್ಪ ಹೇಳಿದರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಲಾ ವಿಭಾಗದ ಅಂತಿಮ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಸಂಶೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಶೋಧನೆಯು ಮಾನವನ ಜ್ಞಾನದ ಜೀವಾಳ. ಇದು ಮುಂದಿನ ಜೀವನಕ್ಕೆ ಹೊಸ ನೋಟಗಳು ಹಾಗೂ  ಪುರಾವೆಗಳನ್ನು ಕಂಡುಹಿಡಿಯಲು ಮಾರ್ಗದರ್ಶನ ಮಾಡಿಕೊಡುತ್ತದೆ ಎಂದರು.
ಜೀವನ ಪ್ರಮುಖ ಭಾಗವಾದ ಸಂಶೋಧನೆಯು ಆವಿಷ್ಕಾರಗಳನ್ನು ಮಾಡಲು ಮತ್ತು ದೂರ ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸಲು ಸಹಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕಾ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಆರ್. ರಾಘವೇಂದ್ರ, ರಾಜ್ಯಶಾಸ್ತ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಆರ್.ರಂಗಸ್ವಾಮಿ, ಸಹಾಯಕ ಪ್ರಾಧ್ಯಾಪಕ ಪ್ರೊ. ಕೆ.ವೈ. ಈಶ್ವರ್, ಡಾ.ಎಲ್, ಪ್ರವೀಣ್‌ಕುಮಾರ್, ಡಾ. ಎ.ಬಿ. ವಿಜಯಕುಮಾರ್, ಪ್ರೊ. ಎಂ. ಮಂಜಪ್ಪ, ಪ್ರೊ. ಎಸ್. ಪರಮೇಶ್, ಡಾ. ಕಾವ್ಯಶ್ರೀ ಇತರರಿದ್ದರು.
--