ಜಿಲ್ಲೆ

ಹೈಸ್ಕೂಲ್ ಮೈದಾನ ಸುಸ್ಥಿತಿಗೆ ಒತ್ತಾಯ

ಡಿ. ಎಂ. ಮಹೇಶ್

ದಾವಣಗೆರೆ: ಹಾಳೂರ ಕೊಂಪೆಯಂತಾಗಿರುವ ನಗರದ ಹೈಸ್ಕೂಲ್ ಮೈದಾನವನ್ನು ಶಾಸಕರು ಮತ್ತು ಜಿಲ್ಲಾಡಳಿತ ಗಮನಹರಿಸಿ ಸುಸ್ಥಿತಿಗೊಳಿಸುವಂತೆ ಆಗ್ರಹಿಸಿ ದಾವಣಗೆರೆ ಹೈಸ್ಕೂಲ್ ಮೈದಾನ ಉಳಿಸಿ ಹೋರಾಟ ಸಮಿತಿ ಸೋಮವಾರ, ಎಡಿಸಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಿತು.
ನಗರದ ಹೃದಯ ಭಾಗದ ಹೈಸ್ಕೂಲ್ ಮೈದಾನವು ಅಭಿವೃದ್ಧಿ ಹೆಸರಿನಲ್ಲಿ ವಿವಿಧ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ ನವೀಕರಣದ ಕಾರಣಕ್ಕೆ ಇಲ್ಲಿಯೇ 3 ವರ್ಷದಿಂದ ತಾತ್ಕಾಲಿಕ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ಈ ನಿಲ್ದಾಣಗಳು ಮೂಲ ಸ್ಥಾನಕ್ಕೆ ಹೋಗಿದ್ದರೂ ತಾತ್ಕಾಲಿಕ ನಿಲ್ದಾಣದ ಖಾಲಿ ಕಟ್ಟಡಗಳು ತೆರವಾಗಿಲ್ಲ.
ಕೂಡಲೆ ಅವನ್ನು ತೆರವುಗೊ ಳಿಸಿ ಸಂಪೂರ್ಣ ಮೈದಾನವನ್ನು ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಮಾಡಬೇಕು. ಮೈದಾನದ ಮೂಲ ಉದ್ದೇಶವಾಗಿರುವ ಕ್ರೀಡೆ, ಸಾಂಸ್ಕೃ ತಿಕ ಚಟುವಟಿಕೆ ಮತ್ತು ವಾಯುವಿಹಾರಿಗಳಿಗೆ ಪೂರಕವಾಗುವಂತೆ ಸುಸಜ್ಜಿತಗೊಳಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಮಳಿಗೆ, ವ್ಯಾಪಾರಿಗಳಿಗೆ ಅವಕಾಶ ನೀಡಬಾರದು. ಮೈದಾನವನ್ನು ತಗ್ಗು ದಿಣ್ಣೆಗಳಿಲ್ಲದೆ ಸಮತಟ್ಟಾಗಿಸಬೇಕು. ಸ್ವಚ್ಛತೆ, ಶುದ್ಧ ಕುಡಿವ ನೀರು ಮತ್ತು ಮೂಲ ಸೌ ಕರ್ಯ ಒದಗಿಸಬೇಕು. ವಿವಿಧ ಸರ್ಕಾರಿ ಕ್ರೀಡಾಕೂಟಗಳನ್ನು ಏರ್ಪಡಿಸಬೇಕೆಂದು ಆಗ್ರಹಿಸಿದರು.
ಸಮಿತಿಯ ಮುಖಂಡರಾದ ಪಿ. ಪರಶುರಾಂ, ಕಾಂತರಾಜ್, ಅಬ್ದುಲ್ ಖಾದರ್, ಸೈಯದ್ ಖಾಸಿಂ, ಕುತುಬದೀನ್, ಅಲ್ತಾಫ್, ಅಮ್ಜದ್ ಖಾನ್, ಮೊಹಮ್ಮದ್ ಇಮ್ತಿಯಾಜ್, ವೆಂಕಟೇಶ್ ಇತರರಿದ್ದರು.
--
ಚಿತ್ರ: ಡಿವಿಜಿ ಹೈಸ್ಕೂಲ್ ಫೀಲ್ಡ್ ಡಿ.9
ದಾವಣಗೆರೆಯ ಹೈಸ್ಕೂಲ್ ಮೈದಾನವನ್ನು ಸುಸ್ಥಿತಿಗೊಳಿಸುವಂತೆ ಆಗ್ರಹಿಸಿ ಮೈದಾನ ಉಳಿಸಿ ಹೋರಾಟ ಸಮಿತಿ ಸೋಮವಾರ, ಎಡಿಸಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಸಲ್ಲಿಸಿತು. ಮುಖಂಡರಾದ ಪಿ. ಪರಶುರಾಂ, ಕಾಂತರಾಜ್, ಅಬ್ದುಲ್ ಖಾದರ್, ಸೈಯದ್ ಖಾಸಿಂ, ಕುತುಬದೀನ್, ಅಲ್ತಾಫ್ ಇದ್ದರು.