ಜಿಲ್ಲೆ

ಕಟ್ಟುತ್ತೇವ ನಾವು.. ಒಂದಾಗಿ ಪಕ್ಷ ಯಡಿಯೂರಪ್ಪ ವಿಶ್ವಾಸ

ಡಿ. ಎಂ. ಮಹೇಶ್

ದಾವಣಗೆರೆ: ಬಿಜೆಪಿಯಲ್ಲಿ ಕೆಲವರು ಒಡಕು ಉಂಟು ಮಾಡ್ತಾ ಇರೋದು ನಿಜ. ಇದು ಕೇಂದ್ರದ ನಾಯಕರ ಗಮನಕ್ಕಿದೆ. ಕೆಲವೇ ದಿನಗಳಲ್ಲಿ ಒಟ್ಟಾಗಿ ಪಕ್ಷ ಕಟ್ಟುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುವವರಿಗೆ ನಾನು ವಿನಂತಿ ಮಾಡುತ್ತೇನೆ.
ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬನ್ನಿ ಚರ್ಚೆ ಮಾಡೋಣ ಏನಾದರೂ ಕೊರತೆ ಇದ್ದರೆ ಸರಿಪಡಿಸಿ ಮುಂದ ಸಾಗೋಣ ಹಾಗೂ  ಪಕ್ಷ ಬಲಪಡಿಸುವ ಕೆಲಸ ಮಾಡೋಣ ಎಂದು ಶಾಸಕ
ಯತ್ನಾಳ್ ತಂಡಕ್ಕೆ ಸಲಹೆ ನೀಡಿದರು.
ಕಾಂಗ್ರೆಸ್ ನವರು ಜೆಡಿಎಸ್ ಶಾಸಕರನ್ನು ಸೆಳೆಯುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಎಸ್ ವೈ,ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ.ಬಿಜೆಪಿ ಜೆಡಿಎಸ್ ಒಂದಾಗಿ ಮುಂದಿನ ಚುನಾವಣೆಗೆ ಹೋಗುತ್ತೇವೆ.
ಒಟ್ಟಾಗಿ ಹೋದರೆ ಅಧಿಕಾರಕ್ಕೆ ಬರೋದು ಕಷ್ಟ ಆಗಲ್ಲ ಎಂದರು.
ಕುಮಾರಸ್ವಾಮಿ, ದೇವೇಗೌಡರು ನಾವೆಲ್ಲ ಒಂದಾಗಿದ್ದೇವೆ. ಪಕ್ಷದಲ್ಲಿ ಅನೇಕ ಮಾಜಿ ಶಾಸಕರು ಇದ್ದಾರೆ ಮುಂದೆ ಗೆದ್ದು ಬಿಜೆಪಿ ಸರ್ಕಾರ ತರುತ್ತೇವೆ. ಸದ್ಯ ವಾತಾವರಣ ನಿರೀಕ್ಷೆ ಮೀರಿ ಚೆನ್ನಾಗಿದೆ.
ಮತ್ತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.ರಾಜ್ಯದ ಜನ ಗಟ್ಟಿಯಾಗಿ ಬೆಂಬಲಿಸಬೇಕು. ಪೊಳ್ಳು ಘೋಷಣೆಗೆ ಬಲಿಯಾಗದೆ ಬಿಜೆಪಿ ಬೆಂಬಲಿಸಿ ಎಂದರು.
ಬ್ರಿಟಿಷರನ್ನು ಓಡಿಸಿದ ಕಾಂಗ್ರೆಸ್ ಗೆ ಬಿಜೆಪಿ ಯಾವ ಲೆಕ್ಕ ಎಂದು ಹೇಳಿರುವ ಶಿವರಾಜ್ ತಂಗಡಗಿ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅಂತವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಅಂತವರ ಕುರಿತು ನಾನು ಮಾತನಾಡುವುದಿಲ್ಲ ಎಂದರು.