ದಾವಣಗೆರೆ: ಷೇರು ವ್ಯವಹಾರ ಕುರಿತಂತೆ ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರಿಂದ 64.91 ಲಕ್ಷ ರೂ. ಪಡೆದು ವಂಚನೆ ಮಾಡಲಾಗಿದೆ. ಸಿಇಎನ್ ಆಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಏಪ್ರಿಲ್ 28ಂದು ಪಿರ್ಯಾದುದಾರರೊಬ್ಬರು ಇನ್‌ಸ್ಟ್ರಾ ಖಾತೆ ನೋಡುತ್ತಿದ್ದಾಗ ಬಂದ ಜಾಹೀರಾತಿನಲ್ಲಿ ರಚನಾ ರನಾಡೆ ಮಾತನಾಡುವ ವಿಡಿಯೋ ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅವರ ಫೋನ್ ನಂಬರನ್ನು ಮಲ್ಟಿಪ್ಲಸ್ ಕ್ಲಬ್ ವಿಐಪಿ-66 ಗ್ರೂಪ್‌ಗೆ ಸೇರಿಸಿಕೊಂಡು ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ ಹಣ ಗಳಿಸುವ ಮಾಹಿತಿ ನೀಡಲಾಯಿತು.
ನಂತರ ತಿಳಿಸಿದಂತೆ ಎಂಟಿಪಿಎಸ್ ಅಪ್ಲಿಕೇಷನನ್ನು ಗೂಗಲ್ ಪೇ ಪ್ಲೇ ಸ್ಟೋರ್ ಮೂಲಕ ಇನ್‌ಸ್ಟಾಲ್ ಮಾಡಿದ ಪಿರ‌್ಯಾದುದಾರರು ಹಂತ ಹಂತವಾಗಿ 11.32 ಲಕ್ಷ ರೂ. ಹಣ ಹಾಕಿದ್ದಾರೆ. 1 ಸಾವಿರ ರೂ. ಲಾಭಾಂಶದ ಹಣ ಖಾತೆಗೆ ಜಮೆಯಾಗಿದ್ದು ವಿತ್‌ಡ್ರಾ ಮಾಡಲು ಹೋದಾಗ ಶೇ.20ರಷ್ಟು ಲಾಭದ ತೆರಿಗೆ ಜಮೆ ಮಾಡುವಂತೆ ಹೇಳಿದ ಸೈಬರ್ ವಂಚಕರು ವಂಚನೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಜೂ.4ರಂದು ಅಪರಿಚಿತ ವ್ಯಕ್ತಿಯು ಪಿರ್ಯಾದಿಯ ಮೊಬೈಲ್ ನಂಬರನ್ನು ಎನ್1 ವೆಲ್ತ್ ಎನ್‌ಹಾನ್ಸ್‌ಮೆಂಟ್ ಸ್ಟ್ರಾಟೆಜಿ ವಾಟ್ಸಾೃಪ್ ಗ್ರೂಪ್‌ಗೆ ಸೇರಿಸಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಠೇವಣಿ ಮಾಡಲು ಸಲಹೆ ನೀಡಿದರು. ನಂತರ ಗ್ರೂಪ್‌ಗೆ ಸೇರಲು ಸೂಚಿಸಿದರು. ಟ್ರೇಡಿಂಗ್‌ಗಾಗಿ ಪಿರ್ಯಾದಿಯ ಆಧಾರ್‌ಕಾರ್ಡ್, ಪಾನ್ ಕಾರ್ಡ್ ಮಾಹಿತಿ ಪಡೆದು ್ಝಟಠಿಛಿಜಿ.್ಚಟಞ ವೆಬ್‌ಸೈಟ್‌ನಲ್ಲಿ ಖಾತೆ ತೆರೆಯಿಸಿದರು. ಅವರು ಸೂಚಿಸಿದ ಷೇರುಗಳಿಗೆ ಖಾತೆಯ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ 53.59 ಲಕ್ಷ ರೂ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಂತರ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಷೇರು ಮಾರ್ಕೆಟ್‌ಗೆ ಹೂಡಿಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು/ವಂಚನೆ ಸುದ್ದಿ/ ಸಂದೇಶಗಳನ್ನು ನಂಬಬಾರದು ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.