ಜಿಲ್ಲೆ

ಭಾಷಾ ಬಾಂಧವ್ಯದಿಂದ ರಾಷ್ಟ್ರದ ಪ್ರಗತಿ

ಡಿ. ಎಂ. ಮಹೇಶ್

ದಾವಣಗೆರೆ: ರಾಜ್ಯಗಳ ನಡುವಿನ ಭಾಷಾ ಬಾಂಧವ್ಯ, ಪರಸ್ಪರ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರಾಭಿವೃದ್ಧಿಗೂ ಇದು ಅವಶ್ಯಕ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ ಹೇಳಿದರು.
ದಾವಣಗೆರೆ  ಕೇರಳ ಸಮಾಜದ ವತಿಯಿಂದ ರಾಘವೇಂದ್ರ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಅಥವಾ ಕೇರಳ ಮೂಲತಃ, ವಿಶ್ವದಲ್ಲೇ ಮೌಲ್ಯಯುತವಾದ ಭಾರತೀಯ ಸಂಸ್ಕೃತಿ ಹೊಂದಿವೆ. ಮಾತೃಭಾಷೆಯೊಂದಿಗೆ ಮಾತೃ ಸಂಸ್ಕೃತಿಯೂ ಇರುತ್ತದೆ. ಹಾಗಾಗಿ ಮಾತೃಭಾಷೆಯ ಉಳಿವು ಅವಶ್ಯ, ಬಳಸಿದ ಭಾಷೆ ಉಳಿಯುತ್ತದೆ ಎಂದರು.
ಕನ್ನಡ ಭಾಷೆ ಹಾಗೂ ಕರ್ನಾಟಕದ ಸಂಸ್ಕೃತಿ ಅತ್ಯುತ್ತಮವಾಗಿದ್ದು ಈ ರಾಜ್ಯದಲ್ಲಿ ಬಂದು ನೆಲೆಸಿದವರು ಇದನ್ನು ಮೈಗೂಡಿಸಿಕೊಂಡು ರಾಜ್ಯೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದರು.               ಕಾರ್ಯಕ್ರಮದಲ್ಲಿ ರಾಘವೇಂದ್ರ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಮೃತ್ಯುಂಜಯ ತಿಗಡಿಮಠ , ದಾವಣಗೆರೆ ಕೇರಳ ಸಮಾಜದ ಅಧ್ಯಕ್ಷ ಪವಿತ್ರನ್, ಉಪಾಧ್ಯಕ್ಷೆ ಮಂಜುಶಾ ಸಿಮೋನ್, ಕಾರ್ಯದರ್ಶಿ ಮಣಿಕುಟ್ಟನ್, ಖಜಾಂಚಿ ಅನೀಶ್, ದಾವಣಗೆರೆ ಕೇರಳ ಸಮಾಜ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಸನ್ನಾ,  ಕಾರ್ಯದರ್ಶಿ ಸೀಮಪ್ರಿಯ, ಖಜಾಂಚಿ ರೋಷಿಣಿ ಇದ್ದರು.
ಅನನ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರೆ, ಸುಚಿತ್ರಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕರ್ನಾಟಕ ಏಕೀಕರಣ ಕುರಿತಾಗಿ ಕೋಟೇಶ್ ಮಾತನಾಡಿದರು. ಬಿ. ಸುಚಿತ್ರಾ ವಂದಿಸಿದರು.
----