ದಾವಣಗೆರೆ ತಾಲೂಕಿನ ಗಂಗನಕಟ್ಟೆ ಗ್ರಾಮದ ರೈತ ಬೆಳೆದಿದ್ದ ಎಲೆಕೋಸನ್ನು ಖರೀದಿಸುತ್ತಿರುವ ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ. 
ಜಿಲ್ಲೆ

ಮಾನವೀಯತೆ ಮೆರೆದ ಜಿಪಂ ಸದಸ್ಯ

ದಾವಣಗೆರೆ: ಆನಗೋಡು ಕ್ಷೇತ್ರದ ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ ಅವರು ರೈತರು ಬೆಳೆದಿದ್ದ ಎಲೆಕೋಸು ಖರೀದಿಸಿ ದಾವಣಗೆರೆಯ ಸ್ಲಂ ನಿವಾಸಿಗಳಿಗೆ ಹಂಚಿ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಗಂಗನಕಟ್ಟೆ ಗ್ರಾಮದ ರೈತ ಶರಣಪ್ಪ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯನ್ನು ಬೆಲೆ ಕುಸಿತದಿಂದ ಮಾರಾಟ ಮಾಡಿರಲಿಲ್ಲ. ಬೆಳೆಗಾರ ಬಸವಂತಪ್ಪ ಅವರ ಬಳಿ ಸಂಕಷ್ಟ ತೋಡಿಕೊಂಡಿದ್ದರು.
ರೈತನ ನೋವಿಗೆ ಸ್ಪಂದಿಸಿದ ಅವರು, ಜಮೀನಿಗೆ ಭೇಟಿ ನೀಡಿ, ಬೆಳೆಯನ್ನು ಖರೀದಿಸಿ ಧೈರ್ಯ ತುಂಬಿದರು. ಎಲೆಕೋಸನ್ನು ದಾವಣಗೆರೆ ನಗರದ ಸ್ಲಂ ಬಡಾವಣೆಗಳ ನಿವಾಸಿಗಳಿಗೆ ಉಚಿತವಾಗಿ ವಿತರಿಸಿದರು.
ಗ್ರಾಮದ ಮುಖಂಡರಾದ ರಮೇಶಣ್ಣ, ಹೇಮಂತ್, ಮಹಮ್ಮದ್ ಇತರರಿದ್ದರು.