ಜಿಲ್ಲೆ

ಸಾಲ ಬಾಧೆಗೆ ರೈತನ ಆತ್ಮಹತ್ಯೆ

ದಾವಣಗೆರೆ: ಬೆಳೆಹಾನಿ ಹಾಗೂ ಸಾಲ ಬಾಧೆಯಿಂದ ಜಿಗುಪ್ಸೆಗೊಂಡ, ಚನ್ನಗಿರಿ ತಾಲೂಕು ಕಂಚುಗಾರನಹಳ್ಳಿ ಗ್ರಾಮದ ರೈತ ಸಿದ್ದಪ್ಪ ಬಲ್ಲೂರು (78) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಜಮೀನಿಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದವರು ಮನೆಗೆ ಮರಳಿರಲಿಲ್ಲ. ವಿಷ ಸೇವನೆ ಮಾಡಿದ್ದ ಸಿದ್ದಪ್ಪ ಅವರನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದರು.
ದಾಗಿನಕಟ್ಟೆ ಗ್ರಾಮೀಣ ಬ್ಯಾಂಕ್‌ನಲ್ಲಿ 8 ಲಕ್ಷ ರೂ. ಸಹಕಾರ ಬ್ಯಾಂಕ್‌ಗಳಲ್ಲಿ 1.20 ಲಕ್ಷ ರೂ. ಸಾಲ ಪಡೆದಿದ್ದ ಸಿದ್ದಪ್ಪ, ಕೆನರಾಬ್ಯಾಂಕ್‌ನಲ್ಲಿ ಬಂಗಾರ ಅಡವಿಟ್ಟಿದ್ದರು. ಇತ್ತ ಬೆಳೆಹಾನಿಯಾಗಿದ್ದರಿಂದ ಸಾಲ ತೀರಿಸುವ ಬಗೆ ತೋಚದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುತ್ರ ಹನುಮಂತಪ್ಪ ರೆಡ್ಡಿ ನೀಡಿದ ದೂರಿನ ಮೇಲೆ ಬಸವಾಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
----