ಜಿಲ್ಲೆ

ಬುದ್ಧಿಶಕ್ತಿ ವೃದ್ಧಿಗೆ ಚದುರಂಗ ಸಹಕಾರಿ   ದಿನೇಶ್ ಕೆ. ಶೆಟ್ಟಿ ಹೇಳಿಕೆ ಅಂತರಜಿಲ್ಲಾ ಚೆಸ್ ಟೂರ್ನಿ ಉದ್ಘಾಟನೆ

ಡಿ. ಎಂ. ಮಹೇಶ್

ದಾವಣಗೆರೆ: ಚದುರಂಗ ಆಟ ಆಡುವುದರಿಂದ ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಲ್ಲದೆ ಅವರು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರೂ ಆಗುತ್ತಾರೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ನಗರದ ಗುರುಭವನದಲ್ಲಿ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅಂತರಜಿಲ್ಲಾ ಮಟ್ಟದ ಚದುರಂಗ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಹೆಸರು ಮಾಡಲಿ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಅಂತಾರಾಷ್ಟ್ರೀಯ ರಾಷ್ಟ್ರೀಯ ಪಂದ್ಯಾವಳಿಗಳು ನಡೆಯುವಂತಾಗಲಿ ಎಂದು ಹೇಳಿದರು.
ಪಾಲಿಕೆಯ ಮಾಜಿ ಸದಸ್ಯ ಡಿ.ಎನ್. ಜಗದೀಶ್, ಅಂತಾರಾಷ್ಟ್ರೀಯ ಚೆಸ್ ರೆಫ್ರಿ ಪ್ರಾಣೇಶ್ ಯಾದವ್, ವಿಜಯಕುಮಾರ್, ಸಂಘಟಕ ಯುವರಾಜ್, ಮಂಜುಳಾ ಇದ್ದರು.
ಏಳು ಸುತ್ತುಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳ 130ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. 8,10 ,12,14,16, ವರ್ಷದ ಒಳಗಿನ ಮಕ್ಕಳಿಗೆ 80ಕ್ಕೂ ಹೆಚ್ಚು ವಿಶೇಷ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
---