ಜಿಲ್ಲೆ

ತೃತೀಯ ಲಿಂಗಿಗಳ ಕಷ್ಟಕ್ಕೆ ಧ್ವನಿಯಾಗುವೆ      ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ

ಡಿ. ಎಂ. ಮಹೇಶ್

ದಾವಣಗೆರೆ: ತೃತೀಯ ಲಿಂಗಿಗಳ ಎಲ್ಲ ಸಂಕಷ್ಟಕ್ಕೂ ನಾನು ಸ್ಪಂದಿಸುತ್ತೇನೆ. ಅವರ ಧ್ವನಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೌಲಭ್ಯ ಕಲ್ಪಿಸಲಾಗುವುದು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ದಾವಣಗೆರೆಯ ಬಾಪೂಜಿ ಅತಿಥಿಗೃಹದಲ್ಲಿ ಗುರುವಾರ, ತೃತೀಯ ಲಿಂಗಿಗಳ ಜತೆ ಸಂವಾದ ನಡೆಸಿ ಅವರ ಸಂಕಷ್ಟ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಈ ಮೊದಲು ನಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಅವಕ್ಕೆಲ್ಲ ಪರಿಹರಿಸುವ ಕೆಲಸ ಮಾಡಿದ್ದೇವೆ ಎಂದರು.
ಮೖತ್ರಿ ಯೋಜನೆಯಡಿ ತೃತೀಯ ಲಿಂಗಿಗಳಿಗೆ 800 ರೂ. ಸೌಲಭ್ಯ ಬಿಟ್ಟರೆ ಬೇರೆ ಅನುಕೂಲತೆಗಳಿಲ್ಲ, ಗ್ಯಾರಂಟಿ ಯೋಜನೆಗಳು ತಲುಪಬೇಕಿದೆ. ಪಡಿತರ ಚೀಟಿ ದೊರೆತಿಲ್ಲ. ಈ ಎಲ್ಲದರ ಕುರಿತು ತಾಂತ್ರಿಕ ಸಮಸ್ಯೆಗಳಿದ್ದು, ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಪ್ರಭಾ ಭರವಸೆ ನೀಡಿದರು.
ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮವನ್ನು ತೃತೀಯ ಲಿಂಗಿಗಳಿಗೂ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.