ಜಿಲ್ಲೆ

ಭದ್ರಾ ನಾಲೆಯ ನೀರಿನಲ್ಲಿ ಕೊಚ್ಚಿ ಹೋದ ಬಾಲಕ

ಡಿ. ಎಂ. ಮಹೇಶ್

ದಾವಣಗೆರೆ: ತಾಲೂಕಿನ ಲಿಂಗದಹಳ್ಳಿ ಗ್ರಾಮ ಸಮೀಪದ ಭದ್ರಾ ನಾಲೆಗೆ ಬಿದ್ದ ಒಂಬತ್ತು ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಆವರಗೆರೆ ಗೋಶಾಲೆ ನಿವಾಸಿ ಷಣ್ಮುಖಾಚಾರಿ ಎಂಬುವರ ಮಗ, ಮೂರನೇ ತರಗತಿ ಓದುತ್ತಿದ್ದ ಮನೋಜ್ ಕೊಚ್ಚಿಹೋದ ಬಾಲಕ. ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜತೆಗೆ ನಾಲೆ ಬಳಿ ಬಂದಿದ್ದು ಆಟವಾಡುತ್ತಿದ್ದಾಗ ಘಟನೆ ನಡೆದಿದೆ.

ಅಗ್ನಿಶಾಮಕ ದಳ ಹಾಗೂ ಈಜುಗಾರರ ಮೂಲಕ ಸಂಜೆಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ. ಬೇತೂರು, ನಾಗರಕಟ್ಟೆಯವರೆಗೂ ಹುಡುಕಾಟ ನಡೆಸಿದರೂ ಶವ ದೊರೆತಿಲ್ಲ ಎನ್ನಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರವೂ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

----