ದಾವಣಗೆರೆ: ಜಿ.ಎಂ. ವಿಶ್ವವಿದ್ಯಾಲಯವು ವಿವಿಧ ವಿಷಯಕ್ಕೆ ಸಂಬಂಧಿಸಿದ, ಜನೋಪಯೋಗಿ 9 ಪುಸ್ತಕಗಳನ್ನು ಜ್ಞಾನ ಸರಣಿ ಶೀರ್ಷಿಕೆಯಡಿ ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ವಿವಿಯ ಮಾನವ ಸಂಪನ್ಮೂಲ ನಿರ್ದೇಶಕ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ ತಿಳಿಸಿದರು.
ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಯ ಪುಸ್ತಕದ ಪ್ರತಿಗಳನ್ನು ಉಚಿತವಾಗಿ ಪ್ರಕಟಣೆ ಮಾಡಿ ಹಂಚಿಕೆ ಮಾಡಲಾಗುವುದು. ಫೆ. 3ರಂದು ಬಿಡುಗಡೆ ಆಗಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಡಾ. ಉಮಾ ಮುರಳೀಧರ್ ಅವರು ದಂತ ಆರೋಗ್ಯ ಮತ್ತು ಆರೈಕೆ ಕುರಿತಾದ ‘ಡೆಂಟಲ್ ಹ್ಯಾಂಡ್‌ಬುಕ್’ ಎಂಬ ಪುಸ್ತಕ ಬರೆದಿದ್ದಾರೆ.
ಜಿಎಂ ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅವರು ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ನಷ್ಟ, ಸಾಮಾಜಿಕ ಅಸಮಾನತೆಗಳ ಬಗ್ಗೆ ಅರಿವು ಮೂಡಿಸುವ ಸಸ್ಟೈನೆಬಿಲಿಟಿ ಆನ್ ಬಾಕ್ಸ್ಡ್ : ಇನೋವೇಟಿಂಗ್ ಎ ಗ್ರೀನರ್ ಫ್ಯೂಚರ್ ಎಂಬ ಪುಸ್ತಕ ಬರೆದಿದ್ದಾರೆ.
ಸಸ್ಟೈನೆಬೆಲ್ ಫ್ಯೂಚರ್ಸ್ - ಆಪರ್ಚುನಿಟೀಸ್ ಆ್ಯಂಡ್ ಇನ್ನೋವೇಷನ್ಸ್ ಫಾರ್ ಎ ಚೇಂಜಿಂಗ್ ವರ್ಲ್ಡ್ ಎಂಬ ಪುಸ್ತಕವು ಸಾಮಾಜಿಕ ಸಮಾನತೆ ಮತ್ತು ಭದ್ರತೆಗೆ ಶಕ್ತಿ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಹೇಳಲಿದೆ. ‘ಡ್ರೈವಿಂಗ್ ದ ಫ್ಯೂಚರ್ - ಅಂಡರ್ಸ್ಟ್ಯಾಂಡಿಂಗ್ ಎಲೆಕ್ಟ್ರಿಕ್ ಕಾರ್ಸ್ ಇನ್‌ಸೈಡ್ ಔಟ್ ಎಂಬ ಪುಸ್ತಕವು ಎಲೆಕ್ಟ್ರಿಕ್ ವಾಹನಗಳ ಸಂಕೀರ್ಣತೆ ಬಗ್ಗೆ ತಿಳಿಸಲಿದೆ.
ದಾವಣಗೆರೆ ಜಿಲ್ಲೆಯ ಪರಿವರ್ತನೆಯ ಕಾರ್ಯತಂತ್ರದ ಮಾರ್ಗಸೂಚಿ ಪ್ರಸ್ತುತಪಡಿಸುವ ಟ್ರಾನ್ಸ್‌ಫಾರ್ಮಿಂಗ್ ದಾವಣಗೆರೆ ಡಿಸ್ಟ್ರಿಕ್ಟ್ - ಇಂಟರ್ವೆನ್ಷನ್ ಆಫ್ ಜಿಎಂ ಯೂನಿವರ್ಸಿಟಿ ಥ್ರೂ ಎಜುಕೇಶನ್ ಆ್ಯಂಡ್ ಇನ್ನೋವೇಶನ್ ಎಂಬ ಕೃತಿಯನ್ನೂ ಬರೆದಿದ್ದಾರೆ ಎಂದು ವಿವರಿಸಿದರು.
ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ವಿಭಾಗದಲ್ಲಿ 4 ಪುಸ್ತಕಗಳು ರಚನೆಯಾಗಿದ್ದು ಎಚ್.ಆರ್. ಮಾಧುರಿ, ಸಿ.ಸಿ.ಪ್ರತೀಕ್ಷಾ, ಅವರು ‘ಮೆನ್‌ಸ್ಟ್ರುವೆಲ್‘, ಎಚ್.ಎಂ. ತೇಜಸ್ವಿನಿ ಅವರು ‘ಹೆಲ್ಪಿಂಗ್ ಹ್ಯಾಂಡ್ಸ್ - ಸರಳ ಸಹಾಯ ಮಾರ್ಗದರ್ಶಿ: ಮಾಡಬೇಕಾದವು ಮತ್ತು ಮಾಡಬಾರದವು’, ಮೊಹಮ್ಮದ್ ಯಸೂಫ್ ಮಲ್ಲಿಕ್ ದಾಮಿನಿ, ಎಸ್.ಎ. ರಾಕೇಶ್ ಅವರ ‘ದೈನಂದಿನ ಆಹಾರದ ಆರೋಗ್ಯಕರ ಶಕ್ತಿ’, ಡಾ. ಬಿ.ಅಮಿತ್ ಕುಮಾರ್, ಆಲಿಶಾ ಎಂ. ಜೈನ್ ಬರೆದ ‘ಫ್ಲರಿಶ್- ಆರೋಗ್ಯಕರ ಜೀವನದ ದೃಶ್ಯ ಮಾರ್ಗದರ್ಶಿ’ ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ.
ಡಿಡಿಡಿ.ಜಞ್ಠ.ಚ್ಚ.ಜ್ಞಿ ಈ ಅಂತರ್ಜಾಲ ತಾಣದಲ್ಲೂ 9 ಪುಸ್ತಕಗಳ ಮಾಹಿತಿ ಲಭಿಸಲಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜ್, ಕುಲಪತಿ ಡಾ.ಎಸ್.ಆರ್. ಶಂಕಪಾಲ್, ವಿವಿಧ ವಿಭಾಗ ಮುಖ್ಯಸ್ಥರು, ನಿರ್ದೇಶಕರು ಭಾಗಿಯಾಗುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ವಿಭಾಗದ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಇದ್ದರು.