ಜಿಲ್ಲೆ

ದರೋಡೆಕೋರರ ಬಂಧನ

ದಾವಣಗೆರೆ: ತುಮಕೂರು ಮೂಲದ ವ್ಯಕ್ತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರವಲಯದ ಭದ್ರಾ ನಾಲೆ ಬಳಿ ಕರೆದೊಯ್ದು, ಮೊಬೈಲ್ ಕಸಿದಿದ್ದ ಆರು ಮಂದಿ ದರೋಡೆಕೋರರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಅಶೋಕನಗರದ ಎಂ. ಬೀರೇಶ, ವಿನಾಯಕ ವಿನ್ನಿ, ವಿನೋಬನಗರದ ಅರುಣ್, ಕಾರ್ತಿಕ್, ತರುಣ್ ಹಾಗೂ ಮದನ್ ಬಂಧಿತ ಆರೋಪಿಗಳಾಗಿದ್ದು, 20 ಸಾವಿರ ರೂ. ಮೌಲ್ಯದ ಸ್ಯಾಮ್‌ಸಂಗ್ ಎ-15 ಮೊಬೈಲ್, ದರೋಡೆಗೆ ಬಳಸಿದ್ದ ಎರಡು ಹೋಂಡಾ ಶೈನ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯ ರೈಸ್‌ಮಿಲ್ ಒಂದರಲ್ಲಿ ಕೆಲಸ ಹುಡುಕಿಕೊಂಡು ಜೂ. 5ರಂದು ಬಂದಿದ್ದ ತುಮಕೂರು ತಾಲೂಕಿನ ಬೆಳವರ ಗ್ರಾಮದ ಬಿಪಿನ್‌ಕುಮಾರ್, ಹದಡಿ ಮಾರ್ಗದ ಹೆದ್ದಾರಿಯ ಕೆಳಸೇತುವೆಯಲ್ಲಿ ತೆರಳುತ್ತಿದ್ದರು. ಇವರನ್ನು ವಿಚಾರಿಸಿದ ಆರೋಪಿಗಳಿಬ್ಬರು ತಮ್ಮ  ಬೈಕ್‌ನಲ್ಲಿ ಕೂರಿಸಿ ಮುಂದಕ್ಕೆ ಕರೆದೊಯ್ದು ಬೆದರಿಸಿ ಸುಲಿಗೆ ಮಾಡಿದ್ದರು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿದ್ಯಾನಗರ ಠಾಣೆಯ ಪಿಐ ಪ್ರಭಾವತಿ ಸಿ.ಶೇತಸನದಿ, ಪಿಎಸ್‌ಐಗಳಾದ ಜಿ.ಎನ್.ವಿಶ್ವನಾಥ, ಎಂ.ಎಸ್.ಹೊಸಮನಿ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ್ದು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
----