ದಾವಣಗೆರೆ : ಛತ್ರಪತಿ ಶಿವಾಜಿ ಮಹಾರಾಜ್, ಧೈರ್ಯ, ಸ್ಥೈರ್ಯದಿಂದ ಹೋರಾಡಿ ಧರ್ಮದ ರಕ್ಷಣೆ ಮಾಡಿದರು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಹೇಳಿದರು.
ಶುಭಲಕ್ಷ್ಮೀ ಮಹಿಳಾ ಮಂಡಳಿ ವತಿಯಿಂದ ನಗರದ ಪಿಜೆ ಬಡಾವಣೆಯಲ್ಲಿರುವ ಪಿಸಾಳೆ ಕಾಂಪೌಂಡ್‌ನ ಗುಳ್ಳಮ್ಮನ ದೇವಸ್ಥಾನದ ಹತ್ತಿರ ಬುಧವಾರ ಆಯೋಜಿಸಿದ್ದ, ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸ್ವರಾಜ್ಯದ ರಕ್ಷಣೆಗಾಗಿ ಹೋರಾಡಿದ ವೀರ ಹಾಗೂ ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ದಾರ್ಶನಿಕರಾಗಿದ್ದರು. ಅವರ ಜಯಂತ್ಯುತ್ಸವವನ್ನು ನಾಡಿನಾದ್ಯಂತ ವಿಜೃಂಭಣೆಯಿಂದ ಆಚರಿಸಬೇಕು. ಅವರ ವಿಚಾರಗಳನ್ನು ಎಲ್ಲ ಹಿಂದುಗಳಿಗೆ ತಲುಪಿಸಬೇಕು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಎ. ನಾಗರಾಜ್, ವಸಂತಾಬಾಯಿ, ಸರಳಾ ಜಾಧವ್, ಅಂಬಿಕಾ, ದೀಪಾ, ಛಾಯಾ, ವೆಂಕಟೇಶ್, ಸತೀಶ್ ಜಾಧವ್, ಮಧು ಪವಾರ್ ಇದ್ದರು.