ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ಕೆಂಚಪ್ಪ, ವೈದ್ಯರಾದ ಡಾ. ಜಯಕುಮಾರ್, ಡಾ. ಶಾಲಿನಿ, ಸಿಬ್ಬಂದಿ ಏಕಾಂತಮ್ಮ, ಅಣ್ಣೇಶ್ ಇದ್ದರು. visit 
ದಾವಣಗೆರೆ

ಸಾರ್ವಜನಿಕ ಆಸ್ಪತ್ರೆಗೆ ಜಿಪಂ ಸಿಇಒ ಭೇಟಿ visit

ಪ್ರಮುಖ ಮುಖ್ಯಾಂಶಗಳು

  • ಬೆಳಗಿನ ನಡೆ ಹಳ್ಳಿ ಕಡೆ ಅಭಿಯಾನ
  • ವಿವಿಧ ವಿಭಾಗಗಳ ಪರಿಶೀಲನೆ
ಜಗಳೂರು: ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರದೊಳಗೆ ಮಕ್ಕಳ ಐಸಿಯು ಘಟಕ ಪುನಾರಂಭಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ಸೂಚಿಸಿದರು.
ಬೆಳಗಿನ ನಡೆ ಹಳ್ಳಿ ಕಡೆ ಅಭಿಯಾನದಟಿ ಸೋಮವಾರ ಜಗಳೂರಿಗೆ ಭೇಟಿ ನೀಡಿದ್ದ ಸಿಇಒ ಅಲ್ಲಿನ ಆಸ್ಪತ್ರೆಗೆ ತೆರಳಿ ವಾರ್ಡ್‌ಗಳನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ಹೊಸಕೆರೆ ಗ್ರಾಮ ಪಂಚಾಯಿತಿಗೆ ತೆರಳಿ ಪರಿಶೀಲಿಸಿದರು.
ತುರ್ತು ಚಿಕಿತ್ಸಾ ವಿಭಾಗ, ಆಪರೇಷನ್ ಥಿಯೇಟರ್, ಲೇಬರ್‌ವಾರ್ಡ್ ಪರಿಶೀಲಿಸಿ ಅಲ್ಲಿನ ರೋಗಿಗಳ ಜತೆ ಸಮಾಲೋಚಿಸಿದರು.
ಮಕ್ಕಳ ಐಸಿಯು ವಿಭಾಗ ಬಂದ್ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ವಾರದೊಳಗೆ ಆರಂಭಿಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ ಅವರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ, ಔಷಧ ಉಗ್ರಾಣ, ಐಸಿಯು ಘಟಕ, ಲೇಬರ್ ವಾರ್ಡ್, ಮಹಿಳಾ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿಗೆ ಭೇಟಿ ನೀಡಿದ ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಏನೇ ಕುಂದುಕೊರತೆಗಳಿದ್ದರೆ ಗಮನಕ್ಕೆ ತನ್ನಿ ಎಂದು ಹೇಳಿದರು.
ರೋಗಿಗಳು ನೈರ್ಮಲ್ಯ ಕಾಪಾಡಬೇಕು. ಪರಿಸರ ಸ್ವಚ್ಛವಾಗಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಶೌಚಗೃಹಗಳಲ್ಲಿ ಶುಚಿತ್ವ ಕಾಪಾಡಿ. ಎಲ್ಲೆಂದರಲ್ಲಿ ಉಗುಳುವುದು, ಗಲೀಜು ಮಾಡಬೇಡಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಇಒ ಕೆಂಚಪ್ಪ, ವೈದ್ಯರಾದ ಡಾ. ಜಯಕುಮಾರ್, ಡಾ. ಶಾಲಿನಿ, ಸಿಬ್ಬಂದಿ ಏಕಾಂತಮ್ಮ, ಅಣ್ಣೇಶ್ ಮತ್ತಿತರರಿದ್ದರು.